ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಗಂದೂರು ಸೇತುವೆ ಉದ್ಘಾಟನೆ ವಿಷಯ ಸಾಕಷ್ಟು ರಾಜಕೀಯ ಚರ್ಚೆಗೆ ದಾರಿಮಾಡಿಕೊಟ್ಟಿದೆ. ಸಿಎಂ ಸಿದ್ದರಾಮಯ್ಯ ಅವರ ಹೆಸರು ಇನ್ವಿಟೇಷನ್ ಕಾರ್ಡ್‌ನಲ್ಲಿ ಇದ್ದರೂ ಬಹಳ ನಿಧಾನವಾಗಿ ಕರೆದಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ನನಗೆ ಬೇರೆ ಕಾರ್ಯಕ್ರಮಗಳಿವೆ ಮುಂಚೆಯೇ ಹೇಳಿದ್ದರೆ ಸಮಯ ಮಾಡಿಕೊಳ್ಳಬಹುದಿತ್ತು ಎಂದು ಸಿಎಂ ಮಾತನಾಡಿದ್ದಾರೆ.
ಇತ್ತ ಬಿಜೆಪಿಯ ಆರ್. ಅಶೋಕ್ ಇದಕ್ಕೆ ವಾಪಾಸ್ ಮಾತನಾಡಿದ್ದಾರೆ. ಸಿಗಂದೂರಿನಲ್ಲಿ ಅರವತ್ತು ವರ್ಷಗಳ ಕನಸು ಈಡೇರಿಕೆಯಾಗುತ್ತಿದೆ. ಸಿಗಂದೂರಿನ ಪ್ರತಿ ಮನೆಯಲ್ಲಿಯೂ ತೋರಣ ಕಟ್ಟಿದ್ದಾರೆ. ಇಡೀ ಊರು ಹಬ್ಬಂದಂತೆ ಸಂಭ್ರಮಿಸುತ್ತಿದೆ. ಅವರಿಗೆ ಹಬ್ಬ ಪೋಸ್ಟ್‌ಪೋನ್ ಮಾಡಿ ಎಂದು ಹೇಳೋಕೆ ಸಾಧ್ಯವಾ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ತಾನು ಕೊಡ, ಪರರನ್ನು ಕೊಡಲು ಬಿಡ! ಶರಾವತಿ ಹಿನ್ನೀರು ಭಾಗದ ಜನರ 60 ವರ್ಷಗಳ ಕನಸು ಈಡೇರುತ್ತಿರುವ ಇವತ್ತಿನ ಸಂತೋಷದ ದಿನವನ್ನ ಅಲ್ಲಿನ ಜನಸಾಮಾನ್ಯರು ತಮ್ಮ ಮನೆಯ ಹಬ್ಬದಂತೆ ತೋರಣ ಕಟ್ಟಿ, ಹೂವುಗಳಿಂದ ಅಲಂಕಾರ ಮಾಡಿ ಸಂಭ್ರಮ ಪಡುತ್ತಿದ್ದಾರೆ. ಆದರೆ ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕಿದ ಎನ್ನುವಂತೆ ನಾಡಿನ ಮುಖ್ಯಮಂತ್ರಿಗಳಾಗಿ ಇಂತಹ ಐತಿಹಾಸಿಕ ಸುದಿನದಂದು ಅಲ್ಲಿನ ಜನರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಬದಲು ಇಲ್ಲಸಲ್ಲದ ಕ್ಯಾತೆ ತೆಗೆದಿದ್ದೀರಲ್ಲ ಸ್ವಾಮಿ, ನಿಮ್ಮ ಭಂಡತನಕ್ಕೆ ಏನು ಹೇಳೋಣ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಎಲ್ಲಾ ಕೇಂದ್ರ ಸರ್ಕಾರದ ಕಾರ್ಯಕ್ರಮ ಇದು ರಾಜ್ಜದ ಕೆಲಸ ಏನು ಕಾಣಿಸುತ್ತಿಲ್ಲ.