ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ರಾಜೀನಾಮೆ ಕೊಟ್ಟು ವಿಚಾರಣೆಗೆ ಬರಬೇಕು. ಸಿಎಂ ಸ್ಥಾನದಲ್ಲಿ ಇರುವವರನ್ನು ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಪ್ರಶ್ನೆ ಮಾಡಲು ಸಾಧ್ಯನಾ? ಎಂದು ಬಿಜೆಪಿ ಶಾಸಕ ಶ್ರೀವತ್ಸ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಕಠಿಣ ವಿಚಾರಣೆ ಮಾಡುತ್ತಾರೆ ಎಂದು ನಿರೀಕ್ಷೆ ಮಾಡುವುದೇ ತಪ್ಪು. ಮುಖ್ಯಮಂತ್ರಿಯವರನ್ನು ವಿಚಾರಣೆ ಮಾಡುವ ಎಸ್ಪಿ ಸಿಎಂ ಪತ್ನಿಯನ್ನು ಯಾಕೆ ಕಚೇರಿಗೆ ವಿಚಾರಣೆಗೆ ಕರೆದಿಲ್ಲ? ಇದು ನಮಗೆ ಸಮಾಧಾನ ತಂದಿಲ್ಲ. ಹೀಗಾಗಿ ಮೈಸೂರಿನಲ್ಲಿ ಇಂದು ‘ಗೋ ಬ್ಯಾಕ್ ಸಿಎಂ’ ಚಳವಳಿ ಮಾಡುತ್ತಿದೆವೆ ಎಂದು ಶ್ರೀವತ್ಸ ತಿಳಿಸಿದ್ದಾರೆ.