ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನದ ವಾರ್ತೆ ಆಘಾತವುಂಟುಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ್ ರಾಘವೇಂದ್ರ ಹಾಗೂ ಬಿ.ಕೆ. ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಿಎಂ ಹೇಳಿದ್ದಾರೆ.
ಸ್ಪಂದನಾ ಕಸಿನ್ಸ್ ಜತೆಗೆ ಬ್ಯಾಂಕಾಕ್ ಟ್ರಿಪ್ ಹೋಗಿದ್ದು, ಶೂಟಿಂಗ್ ಮುಗಿಸಿದ್ದ ವಿಜಯ್ ರಾಘವೇಂದ್ರ ಕೂಡ ಬ್ಯಾಂಕಾಕ್‌ಗೆ ತೆರಳಿದ್ದರು ಎನ್ನಲಾಗಿದೆ. ಅಣ್ಣನ ಜತೆ ಮಾತನಾಡಿದೆ, ರಾತ್ರಿ ಮಲಗಿದ್ದ ಅತ್ತಿಗೆ ಬೆಳಗ್ಗೆ ಏಳಲೇ ಇಲ್ಲ ಎಂದು ಅಣ್ಣ ಹೇಳಿದ್ರು ಎಂದು ನಟ ಶ್ರೀಮುರುಳಿ ಕಣ್ಣೀರಿಟ್ಟಿದ್ದಾರೆ.