ದಿಗಂತ ವರದಿ ಹಾವೇರಿ:
ಸಿಎಂ ಸಿದ್ದರಾಮಯ್ಯ ಮೂಡಾ ಹಗರಣದಿಂದ ಮುಕ್ತಿ ಪಡೆಯಲೆಂದು ಸಿಎಂ ಅಭಿಮಾನಿಗಳು ಮತ್ತು ಕುರುಬ ಸಮುದಾಯದ ಮುಖಂಡರು ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ದೇವರಗುಡ್ಡದ ಮಾಲತೇಶನ ಮೊರೆ ಹೋಗಿದ್ದಾರೆ.
ಹಾಲುಮತ ಸಮುದಾಯದ ಆರಾಧ್ಯ ದೈವ ದೇವರಗುಡ್ಡದ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರದ ಹಿನ್ನೆಲೆಯಲ್ಲಿ ವಿಶೇಷ ಸಂಕಷ್ಟ ಹರಣ ಪೂಜೆ, ರುದ್ರಾಭಿಷೇಕ ನಡೆಸಲಾಯಿತು.
ದೇವರಗುಡ್ಡದ ಐತಿಹಾಸಿಕ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ಸಿಎಂ ಅಭಿಮಾನಿಗಳು ಮತ್ತು ಮುಖಂಡರು ಈ ಪೂಜೆ ನೆರವೇರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ದೇವರ ಗುಡ್ಡಕ್ಕೆ ಬರುವ ಮುನ್ನ ಕುರುಬ ಸಮಾಜದ ಮುಖಂಡರಿಂದ ಪೂಜೆ ನಡೆದಿದ್ದು, ಐದು ವರ್ಷ ಅವರೆ ಸಿಎಂ ಆಗಿರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ದೇವಸ್ಥಾನದ ಮೂಲಗಳು ತಿಳಿಸಿವೆ.