ಹೊಸದಿಗಂತ ರಾಯಚೂರು :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನದಲ್ಲಿ ಒಮ್ಮೆಯೂ ನಿಜಾನೇ ಹೇಳಿಲ್ಲ. ಅವರು ನೀಡುತ್ತಿರುವ ಹೇಳಿಕೆಗಳೆಲ್ಲ ಬಿಜೆಪಿ ಕುರಿತಾದುವುಗಳಲ್ಲ ಅವೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದವುಗಳೆಂದು ತಿಳಿದುಕೊಳ್ಳಬೇಕು ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಾರೆ ಅನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಬಿಜೆಪಿ ಕುರಿತು ಮಾಡುವ ಟೀಕೆಗಳನ್ನು ಅರ್ಥೈಸಿಕೊಳ್ಳಬೇಕು. ನಾವೆಲ್ಲಾ(ಕಾಂಗ್ರೆಸ್ಸಿಗರು) ಸುಳ್ಳುಗಾರರು ಬಿಜೆಪಿಯವರು ಒಳ್ಳೆಯವರು ಅನ್ನೋ ಭಾವನೆಯಿಂದ ಸಿದ್ದರಾಮಯ್ಯ ಬಾರಿ ಚೆನ್ನಾಗಿ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರು ಭಾಷಣ ಮಾಡುವ ಸಂದರ್ಭದಲ್ಲಿ ಎಮೋಷನಲ್ಲಿ ಬಿಜೆಪಿಯನ್ನು ಹೊಗಳುವರು ಅವರೇ. ಸಿದ್ದರಾಮಣ್ಣನ ನಾನು 40 ವರ್ಷದಿಂದ ನೋಡುತ್ತಿದ್ದೇನೆ, ಅವರ ಎಲ್ಲಾ ಮುಖಗಳು ನನಗೆ ಗೊತ್ತಿದೆ. ಹಳೆಯ ಸಿದ್ದರಾಮಣ್ಣ ಈಗಿಲ್ಲ. ಹೊಸ ಸಿದ್ದರಾಮಣ್ಣ ಇದ್ದಾರೆ, ಅವರ ಮಾತಿಗೆ ಅಂತಹ ಮಹತ್ವ ಕೊಡಬೇಕಾಗಿಲ್ಲ ಎಂದರು.