ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಅನಾರೋಗ್ಯದಿಂದಾಗಿ ಸಿಎಂ ಸಿದ್ದರಾಮಯ್ಯ ಅಧಿವೇಶನದಿಂದ ಹೊರಗುಳಿದಿದ್ದಾರೆ.
ಬಜೆಟ್ ಕಾರ್ಯ ಹಾಗೂ ನಿರಂತರ ಪ್ರವಾಸಗಳಿಂ ಸಿಎಂಗೆ ಅನಾರೋಗ್ಯ ಎದುರಾಗಿದ್ದು, ಕಾವೇರಿ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಗಂಟಲು ನೋವು ಕಾಣಿಸಿಕೊಂಡ ನಂತರ ವಿಶ್ರಾಂತಿ ಪಡೆಯಲು ತೆರಳಿದ್ದಾರೆ. ಸಿದ್ದರಾಮಯ್ಯ ಕೆಲ ದಿನಗಳ ಹಿಂದಷ್ಟೇ ಸತತ ಮೂರು ಗಂಟೆಗಳ ಬಜೆಟ್ ಭಾಷಣ ಮಂಡಿಸಿದ್ದರು. ಇದರ ನಂತರದ ಎರಡು ದಿನಗಳು ಜಿಲ್ಲಾ ಪ್ರವಾಸ ಕೈಗೊಂಡಿದ್ದರು.