ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು 24ನೇ ಕಾರ್ಗಿಲ್ ವಿಜಯ ದಿನ. ಈ ದೇಶದ ರಕ್ಷಣೆಗಾಗಿ ಮಡಿದ ವೀರ ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ʼಈ ನೆಲದ ಅಖಂಡತೆ ಮತ್ತು ಸಾರ್ವಭೌಮತೆಯ ರಕ್ಷಣೆಗಾಗಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾರತಾಂಬೆಯ ವೀರ ಪುತ್ರರಿಗೆ ನನ್ನ ಗೌರವ ನಮನಗಳು. ಭಾರತೀಯ ಯೋಧರ ತ್ಯಾಗ- ಬಲಿದಾನ, ಸಮರ್ಪಣಾಭಾವವನ್ನು ಕಾರ್ಗಿಲ್ ವಿಜಯ ದಿನದಂದು ಹೆಮ್ಮೆಯಿಂದ ಸ್ಮರಿಸೋಣʼ ಎಂದು ಹೇಳಿದ್ದಾರೆ.
ಈ ನೆಲದ ಅಖಂಡತೆ ಮತ್ತು ಸಾರ್ವಭೌಮತೆಯ ರಕ್ಷಣೆಗಾಗಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾರತಾಂಬೆಯ ವೀರ ಪುತ್ರರಿಗೆ ನನ್ನ ಗೌರವ ನಮನಗಳು.
ಭಾರತೀಯ ಯೋಧರ ತ್ಯಾಗ- ಬಲಿದಾನ, ಸಮರ್ಪಣಾಭಾವವನ್ನು ಕಾರ್ಗಿಲ್ ವಿಜಯ ದಿನದಂದು ಹೆಮ್ಮೆಯಿಂದ ಸ್ಮರಿಸೋಣ.
– ಮುಖ್ಯಮಂತ್ರಿ @siddaramaiah#KargilVijayDiwas2023 pic.twitter.com/DMEEICh4Zg— CM of Karnataka (@CMofKarnataka) July 26, 2023
1999ರ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರ ತ್ಯಾಗ, ಬಲಿದಾನವನ್ನು ಸ್ಮರಿಸಲು ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಎಂದು ಆಚರಣೆ ಮಾಡಲಾಗುತ್ತದೆ. ಈ ಮೂಲಕ ವೀರ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸಲಾಗುತ್ತದೆ.