ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಬೇಕು: ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್

ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದ್ದೆದ ಕೂಡಲ ಸಂಗಮದ ಬಸವ ಜಯಮೃಂತ್ಯುಜಯ ಸ್ವಾಮೀಜಿ ಅವರು, ಸುವರ್ಣಸೌಧದ ಬಳಿ ಪಂಚಮಸಾಲಿ ಮೀಸಲಾತಿಗಾಗಿ ನಡೆದಿದ್ದ ಹೋರಾಟದ ವೇಳೆ ಪೊಲೀಸರಿಂದ ಲಾಠಿ ಚಾರ್ಚ್ ನಡೆದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಪಂಚಮಸಾಲಿ ಮೀಸಲಾತಿ ಹೋರಾಟವೇ ಸಂವಿಧಾನ‌ ವಿರೋಧಿ ಎನ್ನುವ ಹೇಳಿಕೆ ವಾಪಸ್ ಪಡೆದು, ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಪಂಚಮಸಾಲಿ ‌ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಇದೀಗ ಚನ್ನಮ್ಮನ ನಾಡಿನಲ್ಲಿ ಕಾಂತ್ರಿ ಆರಂಭವಾಗಿದೆ. ಇವತ್ತು ಕ್ರಾಂತಿಯನ್ನು ಮಾಡಲು ಸರ್ಕಾರ ಬಡಿದೆಬ್ಬಿಸಿದೆ. ನಮ್ಮ ಹೋರಾಟಕ್ಕೆ ವಕೀಲರ ಬೆಂಬಲ ಕೊಟ್ಟ ಹಿನ್ನೆಲೆ ಕ್ರಾಂತಿಗೆ ನಾಂದಿ ಹಾಡಿದೆ ಎಂದಿದ್ದಾರೆ.

ಡಿಸೆಂಬರ್ 12ರಂದು ಸಿಎಂ ಸಿದ್ದರಾಮಯ್ಯ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವುದು ಸಂವಿಧಾನ ಬಾಹಿರ ಎಂದಿದ್ದಾರೆ. ಈ ಹೇಳಿಕೆಯನ್ನು ಖಂಡಿಸುತ್ತೇನೆ. ಅಂಬೇಡ್ಕರ್ ಸಂವಿಧಾನದ ರೀತಿಯಲ್ಲಿ ಬದುಕಿದ್ದೇವೆ. ನಮ್ಮ ಸಮಾಜದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಳಕಳಿ ಇಲ್ಲದೇ ಇದ್ರೆ ನಮಗೆ ಮೀಸಲಾತಿ ಕೊಡಲ್ಲ ಎಂದಾದರೂ ಹೇಳಿ ಪರವಾಗಿಲ್ಲ ಅಂತ ಸ್ವಾಮೀಜಿ ಕಿಡಿಕಾರಿದ್ದಾರೆ.

ಹೋರಾಟ ಸಂವಿಧಾನ‌ ವಿರೋಧಿ ಎನ್ನುವ ಹೇಳಿಕೆ ವಾಪಸ್ ಪಡೆಯಬೇಕು. ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು ಅಂತ ಸ್ವಾಮೀಜಿ ಆಗ್ರಹಿಸಿದ್ದಾರೆ. ಇದನ್ನು ಹೇಳಲು ಮನಸ್ಸು ಹೇಗೆ ಬಂತು? ಲಿಂಗಾಯತ ಸಂವಿಧಾನ ವಿರೋಧಿ ಇದ್ರೆ ಮತದ ಹಕ್ಕು ಹೇಗೆ ಬರೋಕೆ ಸಾಧ್ಯ? ನಮ್ಮ ಲಿಂಗಾಯತ ‌ಶಾಸಕರನ್ನು ತೆಗೆದು ಹಾಕಿ. ನಮ್ಮ ಹೋರಾಟಕ್ಕೆ ಹಿಂದೆ ಕಾಂಗ್ರೆಸ್ ಶಾಸಕರು ಬೆಂಬಲ ಕೊಟ್ಟಿದ್ರು‌. ನಮ್ಮ ಹೋರಾಟ ಸಂವಿಧಾನ ವಿರೋಧವಾಗಿದ್ದರೆ ಯಾಕೆ ಹೋರಾಟಕ್ಕೆ ಅನುಮತಿ ಕೊಟ್ರಿ ಅಂತ ಖಾರವಾಗಿ ಪ್ರಶ್ನಿಸಿದರು.

ನಿಮಗೆ ನಮ್ಮ ಬಗ್ಗೆ ಕಳಕಳಿ ಇಲ್ಲ. ನಮ್ಮ ಶಾಸಕರಿಗೆ ಬೈದು, ಅಪಮಾನ ಮಾಡಿದ್ರು. ಜಿಲ್ಲಾಧಿಕಾರಿ ಮೂಲಕ ಟ್ರ್ಯಾಕ್ಟರ್ ರ್ಯಾಲಿ ಬಂದ್ ಮಾಡಿಸಿದ್ರು. ಹೋರಾಟವನ್ನು ಹತ್ತಿಕ್ಕಲು ದನಕ್ಕೆ ಬಡದಂಗೆ ಬಡಿದ್ದೀರಿ ನಮ್ಮ ಹೋರಾಟದ ವೇದಿಕೆಗೆ ಹೆಬ್ಬಾಳ್ಕರ್, ಬಾಬಾಸಾಹೇಬ್ ಪಾಟೀಲ್, ಚನ್ನರಾಜ್ ಬಂದಿದ್ದರು. ತಾಕತ್ ಇದ್ರೆ ಹೋರಾಟದಲ್ಲಿ ಪಾಲ್ಗೊಂಡ ಸಚಿವರು, ಶಾಸಕರನ್ನು ವಜಾಗೊಳಿಸಿ ಅಂತ ಸ್ವಾಮೀಜಿ ಸವಾಲು ಹಾಕಿದರು.

ನ್ಯಾಯ ಪಡೆಯಲು ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ. ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದ್ದರು. ಆದರೆ ನಮ್ಮ ಸಮಾಜಕ್ಕೆ ಬೈಯುವ ಮೂಲಕ ಬಸವಣ್ಣನಿಗೆ ಅಪಮಾನ ಮಾಡಿದ್ದೀರಿ. ಲಿಂಗಾಯತರ ಸ್ವಾಭಿಮಾನ ಕೆಣಕುವ ಯತ್ನ ಮಾಡಿದ್ದೀರಿ. ಈ ಹೇಳಿಕೆಯನ್ನು ಸದನದ ಕಡತದಿಂದ ತೆಗೆದು ಹಾಕಬೇಕು ಅಂತ ಸ್ವಾಮೀಜಿ ಆಗ್ರಹಿಸಿದರು.

ಡಿಸೆಂಬರ್ 16 ರಿಂದ ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿ ಧರಣಿ ಮಾಡ್ತಿವಿ. ಅಧಿವೇಶನ ಇರೋವರೆಗೆ ಧರಣಿ ಸತ್ಯಾಗ್ರಹ ಮಾಡ್ತಿನಿ. ನಿಮಗೆ ಅನುಕೂಲ ಇದ್ದರೆ ಬಂದು ಭಾಗವಹಿಸಿ ಎಂದು ಸಮಾಜದ ಜನರಿಗೆ ಕರೆ ನೀಡಿದ್ರು. ಪ್ರತಿ ದಿನ ಒಂದೊಂದು ಜಿಲ್ಲೆಯಿಂದ ಬರೋವರಿಗೆ ಅವಕಾಶ. ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಮತ್ತೆ ಹೋರಾಟ ಮಾಡ್ತೀವಿ ಅಂತ ಸ್ವಾಮೀಜಿ ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!