ಹೊಸದಿಗಂತ ವರದಿ ಕಲಬುರಗಿ:
ನಾಳೆ ಸೋಮವಾರ (ಜ.12)ರಂದು ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಲಿದ್ದು, ಜಿಲ್ಲೆಯ ಇತಿಹಾಸದಲ್ಲೇ ಅಭೂತಪೂರ್ವ ಎನ್ನಲಾದ 1595.91 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ.ಅಜಯ್ ಧರ್ಮಸಿಂಗ್ ತಿಳಿಸಿದರು.
ನಗರದ ಐವನ್ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ಬೆಳಗ್ಗೆ 11 ಗಂಟೆಗೆ ಯಡ್ರಾಮಿಯಲ್ಲಿ 163 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಒಟ್ಟು 17 ಪ್ರಜಾಸೌಧ (ಆಡಳಿತ ಸೌಧ) ಕಟ್ಟಡಗಳಿಗೆ ಅಡಿಗಲ್ಲು ನೆರವೇರಿಸಲಿದ್ದಾರೆ. ಅಕ್ಷರ ಆವಿಷ್ಕಾರ ಯೋಜನೆಯಡಿ ಜಿಲ್ಲೆಯ 300 ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಅಭಿವೃದ್ಧಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೇ, ಯಡ್ರಾಮಿ ಮತ್ತು ಜೇವರ್ಗಿ ತಾಲೂಕು ವ್ಯಾಪ್ತಿಯಲ್ಲಿ 905 ಕೋಟಿ ವೆಚ್ಚದ ಒಟ್ಟು 99 ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: FOOD | ಆರೋಗ್ಯಕರ ಮಸಾಲಾ ಓಟ್ಸ್ ಟ್ರೈ ಮಾಡಿ! ರೆಸಿಪಿ ಇಲ್ಲಿದೆ
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯೇ ಕೆಕೆಆರ್ಡಿಬಿಯ ಮುಖ್ಯ ಗುರಿ. ಪ್ರಜಾಸೌಧದ ಮೂಲಕ ಆಡಳಿತವನ್ನು ಜನರ ಮನೆಬಾಗಿಲಿಗೆ ತಲುಪಿಸುತ್ತಿದ್ದೇವೆ.ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು 300 ಕೆಪಿಎಸ್ ಶಾಲೆಗಳನ್ನು ಅಕ್ಷರ ಆವಿಷ್ಕಾರ ಯೋಜನೆಯಡಿ ಆಧುನೀಕರಣಗೊಳಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಗೆ ಕೊಡುಗೆ
ಒಟ್ಟು ಅನುದಾನ-1595.91 ಕೋಟಿ,467 ಕಾಮಗಾರಿ
ಯಡ್ರಾಮಿ: 905.86 ಕೋಟಿ ಮೊತ್ತದ ಕಾಮಗಾರಿ.
ಸೇಡಂ-690.03 ಕೋಟಿ ಮೊತ್ತದ ಯೋಜನೆ.
ಬೆಳೆ ಪರಿಹಾರ: ಜಿಲ್ಲೆಯ 3.23 ಲಕ್ಷ ರೈತರಿಗೆ 498.73 ಕೋಟಿ ಜಮೆ.
ವಿಶೇಷ ಅನುದಾನ: ರಸ್ತೆ, ಸೇತುವೆ ದುರಸ್ತಿಗೆ 88.80 ಕೋಟಿ ಮೀಸಲು.

