ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ 14ನೇ ಬಜೆಟ್‌ನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಿದ್ದಾರೆ.
ಒಟ್ಟಾರೆ 3.35ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಇದಾಗಿದ್ದು, ಇಡೀ ರಾಜ್ಯವೇ ಬಜೆಟ್‌ಗೆ ಎದುರು ನೋಡುತ್ತಿದೆ. ಗ್ಯಾರೆಂಟಿಗಳು ಸಹಜವಾಗಿ ಎಲ್ಲರನ್ನು ಆಕರ್ಷಿಸಿವೆ, ಆದರೆ ಇದೀಗ ಗ್ಯಾರೆಂಟಿಗಳನ್ನು ಬಿಟ್ಟು ಸರ್ಕಾರ ಏನೆಲ್ಲಾ ನೀಡಲಿದೆ ಎನ್ನುವ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ.
ದೇಶದ ಇತಿಹಾಸದಲ್ಲಿಯೇ ಇದು ಗರಿಷ್ಠ ಸಂಖ್ಯೆಯ ಬಜೆಟ್ ಆಗಿರಲಿದೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಸವಾಲಿನ ಬಜೆಟ್ ಆಗಿದೆ, ಗ್ಯಾರೆಂಟಿಗಳ ಜೊತೆ ಜನತೆಗೆ ಏನೆಲ್ಲಾ ಸಿಗಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಹೆಚ್ಚಾಗಿದೆ. ಸಿದ್ದರಾಮಯ್ಯ 1995ರಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ್ದರು.