ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಕುವೆಂಪು ನಗರದಲ್ಲಿ ನಿರ್ಮಾಣಗೊಂಡಿರುವ ಸಿದ್ದರಾಮಯ್ಯ ಅವರ ನೂತನ ನಿವಾಸಕ್ಕೆ ಇನ್ನು ಪವರ್ ಕನೆಕ್ಷನ್ ಸಿಕ್ಕಿಲ್ಲ!
ಇಂಧನ ಇಲಾಖೆಯಲ್ಲಿ ಹೊಸದಾಗಿ ತಂದಿರುವ ನಿಯಮದಿಂದ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. 80*120 ವಿಸ್ತೀರ್ಣದಲ್ಲಿ ಮನೆಯನ್ನ ನಿರ್ಮಿಸಲಾಗಿದೆ. ಇತ್ತೀಚಿಗಷ್ಟೇ ಸಿದ್ದರಾಮಯ್ಯ ಅವರು ನಿರ್ಮಾಣ ಹಂತದ ಮನೆಗೆ ಭೇಟಿ ನೀಡಿದ್ರು. ಶೀಘ್ರದಲ್ಲೇ ಗೃಹ ಪ್ರವೇಶ ಮಾಡೋದಾಗಿಯೂ ಹೇಳಿದ್ರು. ಆದ್ರೆ ಸಿಎಂ ಮನೆಗೆ ಇನ್ನು ವಿದ್ಯುತ್ ಸಂಪರ್ಕ ಸಿಕ್ಕಿಲ್ಲ.
ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಹೊಸ ನಿಯಮಗಳು ಜಾರಿಯಾಗಿರುವ ಹಿನ್ನೆಲೆ ಸಿಎಂ ಮನೆಗೆ ಪವರ್ ಕನೆಕ್ಷನ್ ಸಿಗುವುದು ಕೂಡ ತಡವಾಗ್ತಿದೆ. ವಿದ್ಯುತ್ ಸಂಪರ್ಕ ಪಡೆಯಬೇಕು ಅಂದ್ರೆ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣ ಪತ್ರ, (ಒಸಿ) ಕಡ್ಡಾಯ ಮಾಡಿದೆ. ಮೈಸೂರಿನಲ್ಲಿರೋ ಸಿಎಂ ಮನೆಗೂ ಓಸಿ ಇಲ್ಲದ ಕಾರಣ ಇನ್ನೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ.

