ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುದಿನಗಳ ಕಾಯುವಿಕೆ ನಂತರ ಇಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ರಾಜ್ಯದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ್ದು, ಪ್ರಮುಖವಾದ ಐದು ಬೇಡಿಕೆಗಳನ್ನು ಸಿಎಂ ಪ್ರಧಾನಿ ಮುಂದೆ ಇಟ್ಟಿದ್ದಾರೆ.
ಯಾವ ಬೇಡಿಕೆಗಳು?
- ಕೇಂದ್ರದಿಂದ ಬರಬೇಕಿದ್ದ ಬರ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡುವುದು
- ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ, ಹೀಗಾಗಿ ನರೇಗಾ ಕೆಲಸವನ್ನು 100 ರಿಂದ 150 ದಿನಕ್ಕೆ ಹೆಚ್ಚಿಸುವುದು.
- ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ನಲ್ಲಿ 5,300 ಕೋಟಿ ರೂಪಾಯಿ ನೀಡುತ್ತೇವೆ ಎಂದು ಹೇಳಲಾಗಿದೆ. ಕೊಟ್ಟ ಮಾತನ್ನು ನಡೆಸಿಕೊಡುವುದು.
- ಮಹದಾಯಿ ವಿಚಾರದಲ್ಲಿ ಗೆಜೆಟ್ ಆಗಿದೆ, ಯಾವ ಅಡೆತಡೆಯೂ ಇಲ್ಲ, ಪರಿಸರ ಕ್ಲಿಯರೆನ್ಸ್ ಬಾಕಿ ಇದೆ, ಕೇಂದ್ರವೇ ಇದನ್ನು ನೀಡಬೇಕಿದೆ. ಇದನ್ನು ಶೀಘ್ರವೇ ನೀಡಬೇಕು.
- ಮೇಕೆದಾಟು ಯೋಜನೆಯಿಂದ ಬೆಂಗಳೂರು ಹಾಗೂ ರಾಮನಗರ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಅನುಕೂಲ ಆಗಲಿದೆ. ಹಾಗಾಗಿ ಯೋಜನೆ ಕಾರ್ಯಾರಂಭಕ್ಕೆ ಅನುಮತಿ ನೀಡಬೇಕು.