ಹೊಸದಿಗಂತ ಡಿಜಿಟಲ್ ಡೆಸ್ಕ್ :
ಇಂದು ಕಲಾಪದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯೆ ಪ್ರೀತಿ ಮಾತುಕತೆ ನಡೆದಿದೆ.
ಹೌದು, ಸಿಎಂ ಸಿದ್ದರಾಮಯ್ಯ ಮಾತನಾಡುವ ವೇಳೆ ಬಸವರಾಜ ಬೊಮ್ಮಾಯಿ ಮಧ್ಯೆ ಮಾತಾಡಿದ್ದು, ಅದಕ್ಕೆ ಸಿದ್ದರಾಮಯ್ಯ, “ಬೊಮ್ಮಾಯಿ ಅವ್ರೇ ನಾವಿಬ್ರೂ ಒಂದೇ, ಆದ್ರೆ ಹೊರಗಡೆ” ಎನ್ನುತ್ತಾರೆ.
ಅದಕ್ಕೆ ಬೊಮ್ಮಾಯಿ ಅವರು” ಹೂಂ, ಹೌದು, ಆದ್ರೆ ಬರೀ ಹೊರಗಡೆ ಯಾಕೆ? ಇಲ್ಲಿನೂ ನಾವು ಒಂದೇ ಅದ್ರಲ್ ಏನಿದೆ” ಎಂದು ನಕ್ಕು ಕುಳಿತಿದ್ದಾರೆ.
ಆಗ ಸಿಎಂ” ನೋಡಿ ಬೊಮ್ಮಾಯಿ ಅವ್ರು ನನ್ ತುಂಬಾ ಲವ್ ಮಾಡ್ತಾರೆ, ಹೊರಗಡೆ ಇದ್ದಾಗ ಪ್ರೀತಿ ತೋರಿಸ್ತಾರೆ, ಒಳಗಡೆ ಬಂದಾಗ ರಾಜಕೀಯವಾಗಿ ವಿರೋಧಿಸ್ತಾರೆ, ಪಾಪ ತಪ್ಪೇನಿಲ್ಲ ಬಿಡಿ, ಮಾಡ್ಲೇಬೇಕು” ಅಂತಾರೆ.
ಅದಕ್ಕೆ ಮತ್ತೆ ಬೊಮ್ಮಾಯಿ” ಹೌದು, ವೈಯಕ್ತಿಕ ಸಂಬಂಧನೇ ಬೇರೆ, ರಾಜಕೀಯ ಸಂಬಂಧನೇ ಬೇರೆ” ಅಂತಾರೆ. ಮತ್ತೆ ಸಿದ್ದು” ಹೌದು, ನೀವು ಹೇಳ್ತಿರೋದು ಕರೆಕ್ಟ್, I agree with you ಎಂದು ಹೇಳಿದ್ದಾರೆ. ಸದನದಲ್ಲಿ ಈ ವೇಳೆ ಎಲ್ಲರ ಮುಖದಲ್ಲೂ ಮುಗುಳ್ನಗೆ ಮೂಡಿದೆ.