ಶೆಟ್ಟರ್ ನಿವಾಸಕ್ಕೆ ಸಿಎಂ ಸಿದ್ದು ಭೇಟಿ: ರಾಜಕೀಯ ಪಡಸಾಲೆಯಲ್ಲಿ ಗರಿಗೆದರಿದೆ ಕುತೂಹಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ್ದಾರೆ.
ಈ ಸಂದರ್ಭ ಶೆಟ್ಟರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಸಿಎಂ, ಒಂದಷ್ಟು ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದ್ದು ರಾಜಕೀಯ ವಲಯದಲ್ಲಿ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಹುಟ್ಟುಹಬ್ಬದ ಪ್ರಯುಕ್ತ ಶೆಟ್ಟರ್ ಮನೆಗೆ ಬಂದಿದ್ದೇನೆ. ಇಲ್ಲಿಯೇ ಉಪಹಾರ ಸೇವಿಸದ್ದೇನೆ. ಈ ಸಂದರ್ಭ ಧಾರವಾಡ ಲೋಕಸಭೆಯಿಂದ ಸ್ಪರ್ಧಿಸಲು ಜಗದೀಶ್ ಶೆಟ್ಟರ್ ಅವರ ಅಭಿಪ್ರಾಯವನ್ನು ಕೇಳಿದ್ದೇವೆ. ಅವರು ಸಹ ಲೋಕಸಭಾ ಚುನಾವಣೆ ಆಕಾಂಕ್ಷಿ ಎಂದು ಪಕ್ಷ ಭಾವಿಸಿದೆ ಎಂದರು. ಈ ಸಂದರ್ಭ ನಗುತ್ತಾ ಉತ್ತರಿಸಿದ ಶೆಟ್ಟರ್ ನಾವು ಟಿಕೆಟ್ ಆಕಾಂಕ್ಷಿ ಅಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!