ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಐಸಿಸಿ ಒಬಿಸಿ ಸಲಹಾ ಮಂಡಳಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಮೊದಲ ನಿರ್ಣಯದಲ್ಲೇ ಮೀಸಲಾತಿ ಹೆಚ್ಚಳ ಪ್ರಸ್ತಾಪ ಮಾಡಿದ್ದಾರೆ. ಪ್ರಸ್ತುತ ಇರುವ ಒಟ್ಟಾರೆ ಮೀಸಲಾತಿ ಮಿತಿ 50% ತೆಗೆದು, 75%ಗೆ ಹೆಚ್ಚಳ ಮಾಡುವ ಹೋರಾಟಕ್ಕೆ ನಿರ್ಣಯ ಕೈಗೊಂಡಿದ್ದಾರೆ.
ಈ ಮೂಲಕ ಒಬಿಸಿ ವರ್ಗಕ್ಕೂ ಅದರ ಸೌಲಭ್ಯ ಸಿಗಬೇಕು. ತೆಲಂಗಾಣ ಮಾದರಿಯಲ್ಲಿ ರಾಷ್ಟ್ರೀಯ ಜಾತಿಗಣತಿ ಆಗಬೇಕು. ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಮೀಸಲಾತಿ ಕಲ್ಪಿಸಬೇಕೆಂದು ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ.
ಇದೇ ವೇಳೆ ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಸಭೆಯಲ್ಲಿ ರಾಹುಲ್ ಗಾಂಧಿಗೆ ನ್ಯಾಯಯೋಧ ಬಿರುದು ನೀಡಿ, ಜಾತಿಗಣತಿ ರಾಹುಲ್ ಹೋರಾಟದ ಫಲ ಎಂದು ಅಭಿನಂದಿಸಿದ್ದಾರೆ.