ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆಗೆ ಕಾಂಗ್ರೆಸ್ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಭಗವಂತ ಖೂಬಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸುತ್ತಿರುವ ಯುವ ಪೀಳಿಗೆಯ ನಾಯಕರಲ್ಲಿ ಸಾಗರ್ ಕೂಡ ಒಬ್ಬರಾಗಿದ್ದಾರೆ. ಅಂದಹಾಗೆ ಸಾಗರ್‌ಗೆ 26 ವರ್ಷ.
ತನ್ನ ಮೇಲೆ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟು ಆಯ್ಕೆ ಮಾಡಿರುವ ಬೀದರ್ ಮಹಾಜನತೆಗೆ ಕೃತಜ್ಞತೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡ್ತೇನೆ. ಸಿಎಂ ಸಿದ್ದರಾಮಯ್ಯ ಸರ್ ಹೇಳಿದ್ದಾರೆ ಶ್ರಮವಹಿಸಿ ಕೆಲಸ ಮಾಡು ಅಂತ, ಹಾಗೇ ಮಾಡ್ತೇನೆ ಎಂದಿದ್ದಾರೆ.