ದಿಗಂತ ವರದಿ ಮಡಿಕೇರಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಪೂರ್ವಾಹ್ನ ನಾಗರಹೊಳೆ ಮೂಲಕ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲಕ್ಕೆ ಆಗಮಿಸುವ ಅವರು ಅಲ್ಲಿಂದ ವೀರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮಕ್ಕೆ ಭೇಟಿ ನೀಡಿ ಎರಡೂ ಕಡೆ ರಸ್ತೆ ಕುಸಿತವಾಗಿರುವುದನ್ನು ವೀಕ್ಷಿಸಲಿದ್ದಾರೆ.
ಬಳಿಕ ಸಿದ್ದಾಪುರಕ್ಕೆ ಭೇಟಿ ನೀಡಿ ಕಾಳಜಿ ಕೇಂದ್ರದಲ್ಲಿರುವವರ ಅಹವಾಲು ಆಲಿಸಲಿದ್ದಾರೆ. ಅಪರಾಹ್ನ ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಅವರು ಬಳಿಕ ಕುಶಾಲನಗರದ ಮಾದಾಪಟ್ಟಣದಲ್ಲಿ ಮನೆ ಕುಸಿತವಾಗಿರುವುದನ್ನು ಪರಿಶೀಲಿಸಲಿದ್ದಾರೆ.