September 19, 2026
Saturday, September 19, 2026
spot_img

ತಮಿಳುನಾಡಿಗೆ ನೀರು ಬಿಡುವಂತೆ ಶಿಫಾರಸ್ಸು: ಸಿಎಂ ವಿಜಯ್ ಸಿನಿಮಾ ಪೋಸ್ಟರ್ ಹರಿದು ಪ್ರತಿಭಟನೆ

ಹೊಸದಿಗಂತ ವರದಿ ಮಂಡ್ಯ :

ಕೃಷ್ಣರಾಜಸಾಗರ ಜಲಾಶಯದಿಂದ ಪ್ರತಿನಿತ್ಯ 3500 ಕ್ಯೂಸೆಕ್‌ನಂತೆ 15 ದಿನಗಳ ಕಾಲ 4.6 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿ ವಿಜಯಸೇನೆ ಕಾರ‌್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ತಮಿಳುನಾಡಿ ಸಿಎಂ ವಿಜಯ್ ಜೋಸೆಫ್ ಅವರ ಚಿತ್ರದ ಪೋಸ್ಟರನ್ನು ಹರಿದುಹಾಕಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನಂತರ ಸರ್ ಎಂ.ವಿ. ಪ್ರತಿಮೆ ಬಳಿಗೆ ಧಾವಿಸಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕುಳಿತು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಿ ರಸ್ತೆ ತೆರವುಗೊಳಿಸಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಕೊನೆಗೆ ಪೊಲೀಸರು ಪ್ರತಿಭಟನಾಕಾರರನ್ನು ಎತ್ತಿಹೊರಕ್ಕೆ ಸಾಗಿಸಿದರು.

ನಂತರ ಪ್ರತಿಭಟನಾಕಾರರು ಗುರುಶ್ರೀ ಚಿತ್ರಮಂದಿರದ ಬಳಿಗೆ ಧಾವಿಸಿ ಚಿತ್ರಪ್ರದರ್ಶನ ಮಾಡದಂತೆ ಒತ್ತಾಯಿಸಿದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರು ನಟಿಸಿರುವ ಜನನಾಯಗನ್ ಚಿತ್ರದ ಪೋಸ್ಟರ್‌ನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !