ಹೊಸದಿಗಂತ ಡಿಜಿಟಲ್ ಡೆಸ್ಕ್:
2024-25ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ 15 ನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. ಹೊಸ ರೇಷ್ಮೆ ಪಂಚೆ, ಅಂಗಿ ಧರಿಸಿ ಕಾವೇರಿ ನಿವಾಸದಿಂದ ವಿಧಾನಸೌಧಕ್ಕೆ ಬಂದರು.
ಈ ಬಾರಿಯ ವಿಶೇಷವೆಂದರೆ ಈ ಹಿಂದೆ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರು ತಮ್ಮ ಬ್ರೀಫ್‌ಕೇಸ್‌ನಲ್ಲಿ ಬಜೆಟ್ ಪ್ರತಿಯನ್ನು ಹೊಂದಿದ್ದರು, ಆದರೆ ಈ ಬಾರಿ ಅದು ಬದಲಾಗಿದೆ. ಸಿಎಂ ಸಿದ್ದರಾಮಯ್ಯ ಸೂಟ್‌ಕೇಸ್ ಬದಲಿಗೆ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ತರುತ್ತಿರುವುದು ವಿಶೇಷವಾಗಿದೆ.