ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರದ ಅನುದಾನ ಪಾವತಿಯಲ್ಲಿನ ತಾರತಮ್ಯದ ವಿರುದ್ಧ ಹೋರಾಟ ನಡೆಸಿದ ಸಿದ್ದರಾಮಯ್ಯ ಇಂದು ಜನತಾದರ್ಶನ ನಡೆಸಲಿದ್ದಾರೆ. ರಾಜ್ಯ ಮಟ್ಟದ ಜನತಾ ದರ್ಶನ ಇದಾಗಿದ್ದು, ಕಾರ್ಯಕ್ರಮಕ್ಕೆ ವಿಧಾನಸೌಧದಲ್ಲಿ ಸಕಲ ಸಿದ್ಧತೆಗಳು ನಡೆಯಲಿವೆ.
ವಿಧಾನಸೌಧದಲ್ಲಿ ಸಿದ್ದರಾಮಯ್ಯ ರಾಜ್ಯದ ಜನತೆಯ ಸಂಕಷ್ಟ ಆಲಿಸಲಿದ್ದಾರೆ. ರಾಜ್ಯ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಸಿದ್ಧಗೊಂಡಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಜನರು ದಾಖಲಿಸಿರುವ ಕುಂದುಕೊರತೆಗಳು ಮತ್ತು ದೂರುಗಳನ್ನು ಸಿಎಂ ಮುಂದೆ ಹೇಳಿಕೊಳ್ಳಬಹುದಾಗಿದ್ದು, ದೂರು ಹಾಗೂ ಮನವಿಗಳನ್ನು ಸ್ವೀಕರಿಸಲು ಇಲಾಖಾವಾರು ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ.
ಜನತಾದರ್ಶನ ನಡೆಯುವ ಸ್ಥಳದಲ್ಲಿ ಸಚಿವಾಲಯದ ಎಲ್ಲ ಇಲಾಖೆಗಳ ಬೂತ್ ಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಬೂತ್ ಗೆ ಒಂದೊಂದು ಸಂಖ್ಯೆ ನಿಗದಿಪಡಿಸಲಾಗಿದೆ. ಸಾರ್ವಜನಿಕ ಸಮಾಲೋಚನೆಗಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ ಮತ್ತು ನಾಗರಿಕರನ್ನು ಮೊದಲು ಪ್ರಶ್ನಿಸಿ ಯಾವ ಇಲಾಖೆಯ ಬೂತ್‌ಗೆ ನಿರ್ದೇಶಿಸಬೇಕು ಎಂದು ವಿಂಗಡಿಸಲಾಗುತ್ತದೆ.
ಈ ಉದ್ದೇಶಕ್ಕಾಗಿ, ಅನುಭವಿ ನಾಗರಿಕ ಸೇವಕರಿಗೆ ಮಾಹಿತಿ ಕೌಂಟರ್ ರಚಿಸಲಾಗಿದೆ. ನಾಗರಿಕರ ಮೊಬೈಲ್ ಫೋನ್ ಸಂಖ್ಯೆ ಮತ್ತು ಮೂಲ ಡೇಟಾವನ್ನು ದಾಖಲಿಸಲು ರಿಜಿಸ್ಟರ್ ಹಾಗೂ ಸ್ಟಾಲ್ ನಂಬರ್ ನಮೂದಿಸಲಾಗುವುದು. ಸ್ಟಾಲ್‌ಗಳಲ್ಲಿ ನಾಗರಿಕರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ. ವೃದ್ಧರು, ಪಿಂಚಣಿದಾರರು, ಅಂಗವಿಕಲರು, ಗರ್ಭಿಣಿಯರು ಹಾಗೂ ಚಿಕ್ಕ ಮಕ್ಕಳಿರುವ ನಾಗರಿಕರಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ..