ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದಾಗಿನಿಂದಲೇ ಜನರ ಕಣ್ಣು ಗ್ಯಾರೆಂಟಿಗಳ ಮೇಲಿದೆ. ನಿನ್ನೆಯಷ್ಟೇ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಎನ್ನುವ ಗ್ಯಾರೆಂಟಿಯನ್ನು ಪೂರ್ಣಗೊಳಿಸಿದ್ದು, ಇನ್ನೂ ನಾಲ್ಕು ಗ್ಯಾರೆಂಟಿ ಪೂರ್ಣವಾಗಬೇಕಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದ ಸದಸ್ಯರೊಂದಿಗೆ ಸಭೆ ನಡೆಸಿದ್ದು, ನಾಳೆಯಿಂದಲೇ ಎಲ್ಲ ಗ್ಯಾರೆಂಟಿಗಳು ಜಾರಿಯಾಗುವ ಸಾಧ್ಯತೆ ಇದೆ.
ಯೋಜನೆ ಜಾರಿ ಮಾಡಿದರೆ ಏನು ತೊಂದರೆಗಳು? ಅಥವಾ ಜಾರಿ ಮಾಡುವುದು ಹೇಗೆ? ಈ ಎಲ್ಲ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಿದ್ದು, ಫಲಾನುಭವಿಗಳನ್ನು ಗುರುತಿಸಲಾಗಿದೆ. ರೂಪುರೇಷೆ ಸಿದ್ಧಪಡಿಸಿ ನಾಳೆ ಸಚಿವ ಸಂಪುಟ ಸಭೆಯಲ್ಲಿ ಗ್ಯಾರೆಂಟಿ ಘೋಷಣೆ ಜಾರಿಗೆ ತರುವ ಸಾಧ್ಯತೆ ಇದೆ.