ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಜಲಪ್ರದೇಶ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ 9 ಸಿಬ್ಬಂದಿಯೊಂದಿಗೆ ಪಾಕಿಸ್ತಾನಿ ಮೀನುಗಾರಿಕಾ ಹಡಗನ್ನು ಕರಾವಳಿ ಕಾವಲು ಪಡೆ ವಶಪಡಿಸಿಕೊಂಡಿದೆ.
ಅರೇಬಿಯನ್ ಸಮುದ್ರದಲ್ಲಿ ಅಲ್-ಮದೀನಾ ಎಂದು ಗುರುತಿಸಲಾದ ಮೀನುಗಾರಿಕಾ ಹಡಗನ್ನು ವಶಪಡಿಸಿಕೊಳ್ಳುವ ಸಮಯದಲ್ಲಿ ಅದು 9 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಭಾರತದ ಹಿರಿಯ ಕರಾವಳಿ ಕಾವಲು ಪಡೆ ಅಧಿಕಾರಿಗಳ ಪ್ರಕಾರ, ಈ ಹಡಗನ್ನು ಮೊದಲು ಜನವರಿ 14ರಂದು ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ (IMBL) ಬಳಿ ಪತ್ತೆ ಮಾಡಲಾಯಿತು. ಹಡಗನ್ನು ನಿಲ್ಲಿಸಲು ಸೂಚಿಸಿದಾಗ, ಆ ಬೋಟ್ ಪಾಕಿಸ್ತಾನಿ ನೀರಿನ ಕಡೆಗೆ ಪಲಾಯನ ಮಾಡಲು ಪ್ರಯತ್ನಿಸಿತು. ಆಗ ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿ ಆ ಹಡಗನ್ನು ವಶಪಡಿಸಿಕೊಂಡರು.
ಅಲ್-ಮದೀನಾ ಹಡಗನ್ನು ಗುಜರಾತ್‌ನ ಪೋರಬಂದರು ಬಂದರಿಗೆ ಎಳೆದುಕೊಂಡು ಹೋಗಲಾಗುತ್ತಿದೆ. ಅಲ್ಲಿಗೆ ಹೋದ ನಂತರ, ವಿವಿಧ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಸಿಬ್ಬಂದಿಯ ಜಂಟಿ ವಿಚಾರಣೆಯ ಭಾಗವಾಗಿ ಅದನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತದೆ.


