ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ಬೆಡಗಿ ತೆಲುಗು ಸಿನಿಮಾದಲ್ಲಿ ಬೇಡಿಕೆಯ ನಟಿ ಕೃತಿ ಶೆಟ್ಟಿ ಉಪ್ಪೇನಾ ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದ್ದು, ಬಳಿಕ ಅವಕಾಶಗಳು ಅವರನ್ನು ಹುಡುಕುತ್ತಲೇ ಬಂದಿದೆ.
ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೃತಿಗೆ ಇದೀಗ ಸ್ಟಾರ್ ನಟನ ಮಗ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ.
ಸ್ಟಾರ್ ಹೀರೋ ಮಗನೊಬ್ಬ ಕೃತಿ ಶೆಟ್ಟಿ ಹಿಂದೆ ಬಿದ್ದಿದ್ದಾರಂತೆ. ಹೇಗಾದರೂ ಮಾಡಿ ಕೃತಿ ಶೆಟ್ಟಿ ಜೊತೆ ಸ್ನೇಹ ಬೆಳೆಸುವಂತೆ ಕಿರುಕುಳ ನೀಡುತ್ತಿದ್ದಾನಂತೆ. ಪ್ರತಿ ಕಾರ್ಯಕ್ರಮದಲ್ಲೂ ಕೃತಿ ಶೆಟ್ಟಿ ಜೊತೆಯೇ ಓಡಾಡಿ ತೊಂದರೆ ಕೊಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇತ್ತೀಚೆಗಷ್ಟೆ ಕೃತಿ ಶೆಟ್ಟಿಗೆ ಫೋನ್ ಮಾಡಿ ಶೂಟಿಂಗ್ ನಿಲ್ಲಿಸಿ ಬರುವಂತೆ ಒತ್ತಾಯ ಮಾಡಿದ್ದರಂತೆ. ಎಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ಪಾರ್ಟಿಗೆ ಬರುವಂತೆ ಚಿತ್ರಹಿಂಸೆ ನೀಡಿದ್ದರಂತೆ. ಈ ಬಗ್ಗೆ ನಟಿ ಕೃತಿ ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದೀಗ ಕೃತಿ ಶೆಟ್ಟಿಗೆ ಟಾರ್ಚರ್ ಮಾಡುತ್ತಿರುವ ಸ್ಟಾರ್ ಹೀರೋ ಮಗ ಯಾರು? ತೆಲುಗು ನಟನ ಮಗನ ಅಥವಾ ತಮಿಳು ನಟನ ಮಗನ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.