ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರು ಅಡಿ ಉದ್ದದ ನಾಗರಹಾವು ಕೂಡ ಒಂದು ಅಡಿ ಉದ್ದದ ಮುಂಗುಸಿಗೆ ಹೆದರುತ್ತದೆ. ಏಕೆಂದರೆ ನಾಗರಹಾವು ಮುಂಗುಸಿ ಕಾಳಗದಲ್ಲಿ ಅಂತಿಮವಾಗಿ ಗೆಲ್ಲುವುದು ಮುಂಗುಸಿಯೇ. ಬದ್ಧ ವೈರಿಗಳಾದ ಇವೆರಡರ ನಡುವೆ ನಡೆಯುವ ಯುದ್ಧ ನೋಡೋದೆ ಒಂದು ಕುತೂಹಲ. ಎಂತಹ ದೊಡ್ಡ ಹಾವುಗಳನ್ನಾದರೂ ಸಹ ಮುಂಗುಸಿ ಮಣಿಸುತ್ತದೆ. ವೈಲ್ಡ್ ಅನಿಮಾಲಿಯಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಇದೇ ರೀತಿಯ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿದೆ.
ಕೊಳಚೆ ನೀರಿನ ಹೊಂಡದಲ್ಲಿ ನಾಗರಹಾವನ್ನು ಕಂಡ ಮುಂಗುಸಿಯೊಂದು ಅದರ ಮೇಲೆ ದಾಳಿ ಮಾಡಿದೆ. ಹಾವು ಕೂಡಾ ಮುಂಗುಸಿಯೊಂದಿಗೆ ಕಾಳಗಕ್ಕಿಳಿದಿದೆ. ಮುಂಗುಸಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ನಾಗರಹಾವು ಹಲವು ಮಾರ್ಗಗಳನ್ನು ಪ್ರಯತ್ನಿಸಿತು. ಪಕ್ಕಕ್ಕೆ ಹೋದರೂ ಬಿಡದೆ ಮುಂಗುಸಿ ಇನ್ನೊಂದು ಕಡೆಯಿಂದ ಹಿಂತಿರುಗಿ ಬಂದು ಮತ್ತೊಮ್ಮೆ ಕಾದಾಟ ನಡೆಸಿದೆ.
ಈ ವಿಡಿಯೋಗೆ 2 ಲಕ್ಷ ವೀಕ್ಷಣೆ ಸಿಕ್ಕಿದ್ದು, ಸಾವಿರಾರು ಲೈಕ್ಸ್ ಬಂದಿದೆ. ಮುಂಗುಸಿಗಳು ನಾಗರಹಾವಿನಂತಹ ವಿಷಕಾರಿ ಹಾವನ್ನೂ ಸಹ ಕಚ್ಚಿ ತಿನ್ನುತ್ತವೆ.