SHOCKING | ಶ್ವೇತಭವನದಲ್ಲಿ ಕೊಕೇನ್ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಶ್ವೇತಭವನದಲ್ಲಿ ಕೊಕೇನ್ ಪತ್ತೆಯಾಗಿದ್ದು, ತೀವ್ರ ತನಿಖೆಗೆ ಆದೇಶಿಸಲಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕ್ಯಾಂಪ್ ಡೇವಿನ್‌ಗೆ ತೆರಳಿದ್ದು, ಈ ವೇಳೆ ಬ್ಯಾಗ್‌ನಲ್ಲಿ ಬಿಳಿಯ ವಸ್ತು ಪತ್ತೆಯಾಗಿದೆ.

ಶ್ವೇತಭವನದ ಯಾವುದೋ ರಹಸ್ಯ ಸ್ಥಳದಲ್ಲಿ ಕೊಕೇನ್ ಪತ್ತೆಯಾಗಿಲ್ಲ, ಬದಲಿಗೆ ಸಾರ್ವಜನಿಕರಿಗೆ ಪ್ರವೇಶ ಇರುವ ಪ್ರದೇಶದಲ್ಲಿಯೇ ಕೊಕೇನ್ ಪತ್ತೆಯಾಗಿದೆ. ರಹಸ್ಯ ಸೇವಾ ಏಜೆಂಟ್‌ಗಳು ಕೊಕೇನ್ ಪತ್ತೆ ಮಾಡಿದ್ದು, ಪರೀಕ್ಷೆಗೆ ಕಳುಹಿಸಿದ್ದರು. ತದನಂತರ ಇದು ಕೊಕೇನ್ ಎನ್ನುವುದು ದೃಢಪಟ್ಟಿದೆ. ಇದು ಶ್ವೇತ ಭವನ ಪ್ರವೇಶಿಸಿದ್ದು ಹೇಗೆ? ಸಾರ್ವಜನಿಕರು ಪ್ರವೇಶಿಸಬಹುದಾದ ಸ್ಥಳದಲ್ಲಿ ಸಿಕ್ಕಿರುವ ಕಾರಣ ಅವರೇನಾದರೂ ತಂದು ಇಟ್ಟಿರಬಹುದಾ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!