ಮುಂಬೈ ವಿಮಾನ ನಿಲ್ದಾಣದಲ್ಲಿ 62.6 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 62.6 ಕೋಟಿ ರೂ. ಮೌಲ್ಯದ ಕೊಕೇನ್ ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಓರ್ವ ಭಾರತೀಯ ಮಹಿಳೆಯನ್ನು ಬಂಧಿಸಿದ್ದಾರೆ.

ಜು.14ರಂದು ಬಂಧಿತ ಮಹಿಳೆ ದೋಹಾದಿಂದ ಮುಂಬೈ ಬಂದಿಳಿದಿದ್ದರು. ಈ ವೇಳೆ ಗುಪ್ತಚರ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು (DRI) ಪರಿಶೀಲನೆ ನಡೆಸಿದಾಗ 6 ಬಿಸ್ಕಟ್‌ ಬಾಕ್ಸ್ ಹಾಗೂ ಮೂರು ಚಾಕೋಲೇಟ್ ಬಾಕ್ಸ್‌ಗಳು ಪತ್ತೆಯಾಗಿವೆ. ಈ 9 ಬಾಕ್ಸ್‌ಗಳಲ್ಲಿ ಕೊಕೇನ್ ಎಂದು ಹೇಳಲಾದ ಬಿಳಿ ಪುಡಿಯ ವಸ್ತು ತುಂಬಿದ ಕ್ಯಾಪ್ಸುಲ್‌ಗಳ ಪತ್ತೆಯಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!