ಕೆಎಸ್ಆರ್ಟಿಸಿಯಿಂದ ಕೊಯಂಬುತ್ತೂರು- ಧರ್ಮಸ್ಥಳ ಮೋಲ್ವೊ ಬಸ್ ಸೇವೆ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆ.ಎಸ್.ಆರ್.ಟಿ.ಸಿ. ವತಿಯಿಂದ ಕೊಯಂಬುತ್ತೂರು- ಧರ್ಮಸ್ಥಳ ಮಧ್ಯೆ ಮೋಲ್ವೊ ಬಸ್ ಸೇವೆ ಆರಂಭಗೊಂಡಿದೆ. ನೂತನ ಬಸ್ ಸೇವೆಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸಿದರು.
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ವಿಭಾಗೀಯ ಸಂಚಲನಾಧಿಕಾರಿ ಮರಿಗೌಡ, ವಿಭಾಗೀಯ ತಾಂತ್ರಿಕ ಶಿಲ್ಪಿ ನವೀನ್ ಕುಮಾರ್, ಮಂಗಳೂರು ಎರಡನೇ ಘಟಕದ ಘಟಕ ವ್ಯವಸ್ಥಾಪಕ ಕರುಣಾಕರ ಉಪಸ್ಥಿತರಿದ್ದರು.
ಬಸ್ ಪ್ರತಿ ದಿನ ಅಪರಾಹ್ನ ಗಂಟೆ ೩.೩೦ಕ್ಕೆ ಕೊಯಂಬುತ್ತೂರಿನಿಂದ ಹೊರಡುವ ವೋಲ್ವೊ ಬಸ್ ರಾತ್ರಿ ೯ ಗಂಟೆಗೆ ಮೈಸೂರು ತಲುಪುತ್ತದೆ. ಮೈಸೂರಿನಿಂದ ರಾತ್ರಿ ಗಂಟೆ ೧೦.೧೫ಕ್ಕೆ ಹೊರಡುವ ಬಸ್ ಮುಂಜಾನೆ ೪ ಗಂಟೆಗೆ ಸುಬ್ರಹ್ಮಣ್ಯ ತಲುಪಿ ಅಲ್ಲಿಂದ ಧರ್ಮಸ್ಥಳಕ್ಕೆ ಮುಂಜಾನೆ ೫ ಗಂಟೆಗೆ ತಲುಪುತ್ತದೆ.
ಮಂಗಳೂರಿನಿಂದ ಅಪರಾಹ್ನ 3.30 ಕ್ಕೆ ಹೊರಟು ಪುತ್ತೂರು, ಸುಳ್ಯ, ಮಡಿಕೇರಿ, ಮೈಸೂರು 10 ಗಂಟೆಗೆ ಮೈಸೂರು ತಲುಪಿ ಮರುದಿನ ಮುಂಜಾನೆ 5 ಗಂಟೆಗೆ ಕೊಯಂಬತ್ತೂರು ತಲುಪಲಿದೆ.
ಎಂದು ಕೆ.ಎಸ್.ಆರ್.ಟಿ.ಸಿ ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!