ರಾಜ್ಯದ ಹಲವು ಭಾಗಗಳಿಗೆ ಫೆಂಗಲ್ ಚಂಡಮಾರುತ ಎಫೆಕ್ಟ್ ಕಾಣಿಸಿದೆ. ದಿನದಲ್ಲಿ ಮೂರು ರೀತಿ ವೆದರ್ ಕೂಡ ಕಾಣಿಸುತ್ತಿದೆ. ಚಳಿ, ಮಳೆ, ಬಿಸಿಲು, ಶೀತಗಾಳಿ ಎಲ್ಲದರಿಂದ ಆರೋಗ್ಯ ಹದಗೆಡುತ್ತಿದೆ. ಅದರಲ್ಲಿ ಹೆಚ್ಚಾಗಿ ವೃದ್ಧರು ಹಾಗೂ ಮಕ್ಕಳ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕಾಗುತ್ತದೆ. ಈ ರೀತಿ ಮಿಕ್ಸ್ ವೆದರ್‌ನಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆ ಬಾಧಿಸುತ್ತದೆ ನೋಡಿ..
ಹೆಚ್ಚಿನ ಪಕ್ಷ ಮಕ್ಕಳಲ್ಲಿ ನೆಗಡಿ, ಶೀತ, ಕೆಮ್ಮು ಸಾಮಾನ್ಯವಾಗಿದೆ.
ಥಂಡಿ ವಾತಾವರಣವಿದ್ದಾಗ ಮೆದುಳಿಗೆ ರಕ್ತ ಸಂಚಲನ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ತಲೆನೋವು, ಮೈಗ್ರೇನ್ ಬರುತ್ತದೆ.
ಇನ್ನು ದಿನವಿಡೀ ಬೆಳಕು ಇಲ್ಲದೆ ಕುಳಿತಾಗ ಸೀಸನಲ್ ಅಫೆಕ್ಟೀವ್ ಡಿಸಾರ್ಡರ್ ಬಾಧಿಸುತ್ತದೆ. ಇದು ನಮ್ಮ ಮೂಡ್ ಮೇಲೆ ಎಫೆಕ್ಟ್ ಮಾಡುತ್ತದೆ.
ಸೂರ್ಯನೇ ಕಾಣದಿದ್ದಾಗ ವಿಟಮಿನ್ ಡಿ ಕೊರತೆಯಾಗುತ್ತದೆ. ಇನ್ನು ಸ್ವಲ್ಪ ಬಿಸಿಲಿದ್ದರೂ ಚಳಿಗೆ ಹೆದರುವ ಜನ ಮನೆಯಲ್ಲೇ ಕೂರುತ್ತಾರೆ. ಹಾಗಾಗಿ ವಿಟಮಿನ್ ಡಿ ಡಿಫಿಶಿಯನ್ಸಿ ಕಾಡುತ್ತದೆ.
ಚಳಿ, ಬಿಸಿಲು, ಮಳೆ ವಾತಾವರಣಕ್ಕೆ ಕೆಲವರಿಗೆ ಉಸಿರಾಟ ಹಾಗೂ ಕಫ ಸಮಸ್ಯೆ ಬಾಧಿಸುತ್ತದೆ.
ಇನ್ನು ಕಾಲುನೋವು, ಮೂಳೆಗಳ ನೋವು, ಜಾಯಿಂಟ್ ಪೇನ್ ಬರುತ್ತದೆ.
ಸಣ್ಣ ಪುಟ್ಟ ಗಂಟಲುನೋವು, ಇನ್ನಿತರ ಸಮಸ್ಯೆಗಳಿಗೆ ಮನೆಯಲ್ಲಿಯೇ ಕಷಾಯ ಇನ್ನಿತರ ಪದಾರ್ಥಗಳನ್ನು ಸೇವಿಸಿ. ಇಮ್ಯುನಿಟಿ ಗಟ್ಟಿಮಾಡುವ ಆಹಾರಕ್ಕೆ ಒತ್ತು ನೀಡಿ.