ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶೀತದ ಸಿರಪ್ ನಿಷೇಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ಮುಂದೆ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶೀತ ನಿರೋಧಕ ಸಿರಪ್ ((Anti Cold Syrup) ನೀಡುವಂತಿಲ್ಲ.

ಹೌದು, ಭಾರತದ ಔಷಧ ನಿಯಂತ್ರಕ (The drugs regulator in India) ಈ ಬಗ್ಗೆ ಮಾಹಿತಿ ನೀಡಿ, ಕೆಮ್ಮಿನ ಸಿರಪ್‌ನಿಂದಾಗಿ ಒಟ್ಟಾರೆ ಈವರೆಗೂ 141 ಮಕ್ಕಳು ಮೃತಪಟ್ಟಿದ್ದಾರೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಶೀತ ನಿರೋಧಕ ಔಷಧಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈ ಸಿರಪ್ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸೇವನೆಗೆ ಯೋಗ್ಯವಲ್ಲ ಎಂದು ಹೇಳಲಾಗಿದೆ.

ಕಳೆದ ಕೆಲ ವರ್ಷಗಳಿಂದಲೂ ಸಿರಪ್‌ನಲ್ಲಿ ವಿಷಾಂಶ ಇರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಗ್ಯಾಂಬಿಯಾ, ಉಜ್ಬೇಕಿಸ್ತಾನ್ ಹಾಗೂ ಕ್ಯಾಮರೂನ್‌ನಲ್ಲಿ ಸಿರಪ್ ಸೇವನೆಯಿಂದ ಮಕ್ಕಳು ಮೃತಪಟ್ಟಿದ್ದರು. ಇದೀಗ ಭಾರತದಲ್ಲಿ ಈ ಸಿರಪ್‌ನ್ನು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವಂತಿಲ್ಲ ಎಂದು ಭಾರತ ಔಷಧ ನಿಯಂತ್ರಕ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!