ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸುವಾಗ ನಮಗೆ ಸಂಬಂಧ ಇಲ್ಲ ಎನ್ನುವಂತೆ ಮೂಕ ಪ್ರೇಕ್ಷರಾಗಿ ನಿಂತಿದ್ದ ಜನರಿಂದ ದಂಡ ಸಂಗ್ರಹಿಸಿ ಸಂತ್ರಸ್ತರಿಗೆ ನೀಡಿ ಎಂದು ಹೈಕೋರ್ಟ್ ಸಲಹೆ ನೀಡಿದೆ.
ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಥಳಿಸಿ ವಿಕೃತಿ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸಲಹೆ ನೀಡಿದೆ. ಮಹಿಳೆ ನೆರವಿಗೆ ಧಾವಿಸದೇ ಮೂಕ ಪ್ರೇಕ್ಷಕರಾಗಿ ನಿಂತಿದ್ದ ಎಲ್ಲರ ಬಳಿಯೂ ದಂಡ ಸಂಗ್ರಹಿಸಿ ಮಹಿಳೆಗೆ ನೀಡಿ ಎಂದು ಸಲಹೆ ನೀಡಲಾಗಿದೆ.
ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಪ್ರಸನ್ನ ಬಿ. ವರಾಳೆ ಹಾಗೂ ನ್ಯಾ ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಹಲ್ಲೆಯಾಗುತ್ತಿದ್ದರೂ ನೋಡುತ್ತಾ ನಿಂತಿದ್ದ ಜನರ ವರ್ತನೆಯನ್ನು ಖಂಡಿಸಿದೆ.
ಬೆಳಗಾವಿಯಲ್ಲಿ ಪ್ರೀತಿಸಿದ ಜೋಡಿಯೊಂದು ಓಡಿಹೋಗಿತ್ತು. ತಮ್ಮ ಮಗಳನ್ನು ಓಡಿಸಿಕೊಂಡು ಹೋದ ಎಂಬ ಸಿಟ್ಟಿನಲ್ಲಿ ಯುವಕನ ತಾಯಿಗೆ ಯುವತಿಯ ಕಡೆಯವರು ಚಿತ್ರಹಿಂಸೆ ನೀಡಿದ್ದರು. ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು.