Monday, December 8, 2025

‘I Give Up’ ಎಂದು ಬರೆದು ಹಾಸ್ಟೆಲ್ ನಲ್ಲೇ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೇಟರ್ ನೋಯ್ಡಾದಲ್ಲಿ ಡೆತ್ ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹಾಸ್ಟೆಲ್‌ನಲ್ಲಿ ಶನಿವಾರ ಜಾರ್ಖಂಡ್ ನಿವಾಸಿ ಕೃಷ್ಣಕಾಂತ್ ಅವರ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಂಸಿಎ) ನ 25 ವರ್ಷದ ವಿದ್ಯಾರ್ಥಿ ಕೃಷ್ಣಕಾಂತ್ ದೆಹಲಿಯ ಬಳಿಯ ತನ್ನ ಹಾಸ್ಟೆಲ್‌ನಲ್ಲಿ “I Give Up” ಎಂದು ಬರೆದಿರುವ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆರಂಭಿಕ ತನಿಖೆಯ ಸಮಯದಲ್ಲಿ, ಎರಡನೇ ವರ್ಷದ ವಿದ್ಯಾರ್ಥಿ ಕೃಷ್ಣಕಾಂತ್ ಕೋಣೆಯಲ್ಲಿ ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರಿಗೆ ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ಕೃಷ್ಣಕಾಂತ್ ಶನಿವಾರ ಕಾಲೇಜಿಗೆ ಹೋಗಿರಲಿಲ್ಲ. ಸಹಪಾಠಿಗಳೊಂದಿಗೆ ನಂತರ ಬರುವುದಾಗಿ ಹೇಳಿದ್ದರು. ಮಧ್ಯಾಹ್ನ, ಅವರ ತಂದೆ ತಮ್ಮ ರೂಮ್‌ಮೇಟ್‌ಗೆ ಕರೆ ಮಾಡಿ ಕೃಷ್ಣಕಾಂತ್ ಏನೋ ಅನಾಹುತ ಮಾಡಿಕೊಳ್ಳತ್ತಾನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೂಡಲೇ ರೂಮಿನ ಬಳಿ ಹೋಗು ಎಂದು ಕೇಳಿದ್ದಾರೆ.

ಈ ಮಾತನ್ನು ಕೇಳಿದ ರೂಮ್ ಮೇಟ್ ಕೂಡಲೇ ತನ್ನ ಹಾಸ್ಚೆಲ್ ಸಹಪಾಠಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರು ಕೃಷ್ಣಕಾಂತ್ ತಂಗಿದ್ದ ರೂಮಿಗೆ ಧಾವಿಸಿದ್ದಾರೆ. ಆದರೆ ರೂಮಿನ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನಂತರ ಅವರು ಬಾಗಿಲು ಒಡೆದು ನೋಡಿದಾಗ ಕೃಷ್ಣಕಾಂತ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡುಬಂತು.

ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರಿಗೆ ಒಂದು ಪರಿಶೀಲಿಸಿದಾಗ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ “ನಾನು ಶರಣಾಗುತ್ತೇನೆ. ದಯವಿಟ್ಟು ನನ್ನ ದೇಹ ಮತ್ತು ನನ್ನ ವಸ್ತುಗಳನ್ನು ನನ್ನ ಕುಟುಂಬಕ್ಕೆ ನೀಡಿ. ತೊಂದರೆಗೆ ಕ್ಷಮಿಸಿ” ಎಂದು ಬರೆಯಲಾಗಿತ್ತು.

error: Content is protected !!