ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಕಾರ್ಯವೈಖರಿಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬಿಚ್ಚಿಡುತ್ತಿರುವ ಭಾರತದ ಸರ್ವಪಕ್ಷ ನಿಯೋಗಕ್ಕೆ ಕೊಲಂಬಿಯಾ ದೇಶದ ಬೆಂಬಲ ನೀಡಿದೆ.
ನಿನ್ನೆ ವರೆಗೂ ಪಾಕಿಸ್ತಾನದ ಪರ ಸಹಾನುಭೂತಿ ತೋರಿದ ಕೊಲಂಬಿಯಾ ಸರ್ಕಾರ ಇದೀಗ ತನ್ನ ಹೇಳಿಕೆಯನ್ನು ವಾಪಸ್ಸು ತೆಗೆದುಕೊಂಡಿದೆ.
ನಿಯೋಗದ ನೇತೃತ್ವ ವಹಿಸಿದ ಶಶಿ ತರೂರ್ ಕೊಲಂಬಿಯಾದ ಹೇಳಿಕೆಗೆ ನಿರಾಶೆ ವ್ಯಕ್ತಪಡಿಸಿದರು. ಇದೀಗ ಕೊಲಂಬಿಯಾ ಕೂಡ ತನ್ನ ಹೇಳಿಕೆಯನ್ನು ವಾಪಸ್ಸು ತೆಗೆದುಕೊಂಡಿದೆ.
ಶಶಿ ತರೂರ್ ಅವರು ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಕೊಲಂಬಿಯಾ ತನ್ನ ಹಿಂದಿನ ನಿಲುವನ್ನು ಬದಲಾಯಿಸಿದೆ ಎಂದು ಹೇಳಿದ್ದಾರೆ. ಈ ಹಿಂದೆ ಭಾರತೀಯ ವೈಮಾನಿಕ ದಾಳಿಯ ನಂತರ ಪಾಕಿಸ್ತಾನಿಗಳಿಗೆ ಸಂತಾಪ ಸೂಚಿಸಿದ್ದಕ್ಕಾಗಿ ಈ ನಿಲುವು ಟೀಕೆಗೆ ಗುರಿಯಾಗಿತ್ತು. ಇದೀಗ ತನ್ನ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿದ ಶಶಿ ತರೂರ್, ನಾವು ಕೊಲಾಂಬಿಯಾದ ವಿದೇಶಾಂಗ ಸಚಿವಾಲಯವನ್ನು ಭೇಟಿದ್ದೇವು, ಅಲ್ಲಿ ನಮಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದರ ಜತೆಗೆ ನಮಗೆ ಒಳ್ಳೆಯ ಸುದ್ದಿಯನ್ನು ಕೂಡ ಕಾದಿತ್ತು. ಅದು ಪಾಕಿಸ್ತಾನದಲ್ಲಿ ಸತ್ತವರಿಗೆ ಸಂತಾಪ ಸೂಚಿಸಿ ನೀಡಿದ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದ್ದು, ಪಾಕ್ ಪರ ಈ ಹೇಳಿಕೆ ನೀಡಿದಕ್ಕೆ ನಿರಾಶೆಯನ್ನು ನಾವು ವ್ಯಕ್ತಪಡಿಸಿದ್ದೇವು. ಇದೀಗ ಕೊಲಾಂಬಿಯಾ ತನ್ನ ಈ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಅಲ್ಲಿನ ಮುಖ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿಯವರ ಸುಂದರವಾದ ಪ್ರತಿಮೆಯ ಮುಂದೆ ನಿಂತು ಅವರಿಗೆ ಗೌರವ ಸಲ್ಲಿಸಲಾಯಿತು. ಅಲ್ಲಿಂದ ಬೊಗೋಟಾದ ಟಾಡಿಯೊ ಲೊಜಾನೊ ವಿಶ್ವವಿದ್ಯಾಲಯಕ್ಕೆ ನಮ್ಮ ನಿಯೋಗ ಭೇಟಿ ನೀಡಿದೆ. ಅಲ್ಲಿನ ವೇದಿಕೆಯಲ್ಲಿ ನಿಂತು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಸರಣಿ ಮಿಲಿಟರಿ ದಾಳಿಯಾದ ಆಪರೇಷನ್ ಸಿಂಧೂರ್ಕ್ಕೆ ಕೊಲಂಬಿಯಾದ ಪ್ರತಿಕ್ರಿಯೆಯ ಬಗ್ಗೆ ತರೂರ್ ನಿರಾಶೆ ವ್ಯಕ್ತಪಡಿಸಿದ್ದರು . ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ಬದಲಾಗಿ ಪಾಕಿಸ್ತಾನದ ಸಾವುನೋವುಗಳಿಗೆ ಕೊಲಂಬಿಯಾ ಸಹಾನುಭೂತಿ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.