ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್ ಇಂದು ನಿಧನರಾಗಿದ್ದಾರೆ. ನಟನ ನಿಧನಕ್ಕೆ ಸಿನಿ ಮಂದಿ ಕಣ್ಣೀರಿಟ್ಟಿದ್ದು, ನಟ ಜಗ್ಗೇಶ್ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಆತ್ಮೀಯ ಗೆಳೆಯ ಜನಾರ್ಧನ್ ಹೋಗಿ ಬಾ. ನಾವಿಬ್ಬರು ಪಾತ್ರಕ್ಕಾಗಿ ಹಸಿದು ಅಲೆದು ಪಡೆದು ಗೆದ್ದವರು. ನಾನು ನಿನ್ನ ಚಿತ್ರದಲ್ಲಿ ಕರೆಯುತ್ತಿದ್ದ ಬಾಂಡ್ಲಿ ಫಾದರ್ ಪದ ನಿನ್ನ ಓಡನಾಟ ನೆನೆದು ಭಾವುಕನಾದೆ. ಆತ್ಮಕ್ಕೆ ಶಾಂತಿ ಅಂತ ಬರೆದುಕೊಂಡಿದ್ದಾರೆ.
ಚಿತ್ರರಂಗಕ್ಕೆ ಪಾದಾರ್ಪನೆ ಮಾಡಿದ ಸಂದರ್ಭದಲ್ಲಿ ನಟ ಜಗ್ಗೇಶ್ ಜತೆ ಬ್ಯಾಂಕ್ ಜನಾರ್ಧನ್ ಹೆಚ್ಚು ಕಾಲ ಕಳೆದಿದ್ದರು. ಜಗ್ಗೇಶ್ ಬಹುತೇಕ ಚಿತ್ರಗಳಲ್ಲಿ ನಟಿಸಿರುವ ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ. ಜಗ್ಗೇಶ್ಗೆ ತಂದೆಯಾಗಿ ನಟಿಸಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದವು.
ಸೂಪರ್ನನ್ ಮಗ, ತರ್ಲೆ ನನ್ ಮಗ ಚಿತ್ರದಲ್ಲಿ ತಂದೆಯಾಗಿ ನಟಸಿದ್ದರು. ಹಾಸ್ಯಕ್ಕೆ ಕನ್ನಡದಲ್ಲಿ ಮುಸರಿ ಕೃಷ್ಣಮೂರ್ತಿ, ನರಸಿಂಹರಾಜು ಬಳಿಕ ಅವರ ಸ್ಥಾನವನ್ನ ತುಂಬಿದ್ದರು. ಬ್ಯಾಂಕ್ ಜನಾರ್ಧನ್ ಅವರು ಸತತ 20 ವರ್ಷಗಳ ಕಾಲ ಕಾಮಿಡಿ ಪಾತ್ರಗಳಲ್ಲಿ ಬ್ಯುಸಿಯಾಗಿದ್ದರು.