ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಮಾತಾಡಂಗಿದ್ರೆ ಮಾತ್ರ ನಮ್ಮ ಅಂಗಡಿಗೆ ಬಾ ಎಂದು ಕಸ್ಟಮರ್ ಗೆ ಮಹಿಳೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕನ್ನಡ ಮನಸುಗಳು ಕರ್ನಾಟಕ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಸಣ್ಣ ಟೀ ಸ್ಟಾಲ್ ನಡೆಸುತ್ತಿರುವುದನ್ನು ನೋಡಬಹುದು. ಈ ಸ್ಟಾಲ್ ಗೆ ವ್ಯಕ್ತಿಯೊಬ್ಬನು ಬಂದಿದ್ದಾನೆ. ಪರಭಾಷಾ ವ್ಯಕ್ತಿಯೂ ಕನ್ನಡ ಮಾತನಾಡದೇ ತನ್ನದೇ ಭಾಷೆಯಲ್ಲೇ ಏನನ್ನೋ ಕೇಳಿದ್ದಾನೆ.
ಇದರಿಂದ ಕೋಪಗೊಂಡ ಮಹಿಳೆ, ʼಏಯ್.. ಕನ್ನಡದಲ್ಲಿ ಕೇಳು. ಕನ್ನಡ ಮಾತಾಡೋ ಹಾಗಿದ್ರೆ ಅಂಗಡಿ ಹತ್ರ ಬಾ.. ಇಲ್ಲ ಬರಬೇಡʼ ಎಂದು ಖಡಕ್ ಆಗಿ ಹೇಳಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ ನಾಳೆಯಿಂದ ಕನ್ನಡ ಮಾತನಾಡಿದ್ರೆ ಮಾತ್ರ ಐಟಂ ಇಲ್ಲದಿದ್ರೆ ಇಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದಾಳೆ.
ಈ ವಿಡಿಯೋವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ವ್ಯಕ್ತಿಯ ಜೊತೆಗೂ ಮಾತನಾಡಿದ್ದು, ಎಲ್ಲರಿಗೂ ನಾನು ನಿನ್ನೆಯಿಂದ ಅದನ್ನೇ ಹೇಳ್ತಾ ಇರೋದು ಸರ್, ಕನ್ನಡ ಮಾತಾನಾಡಡಿದ್ರೆ ಐಟಂ ಕೊಡುವುದೇ ಇಲ್ಲ ಎಂದಿದ್ದಾರೆ.
❤️🙏 pic.twitter.com/04HxYDgljo
— ಕನ್ನಡ ಮನಸುಗಳು ಕರ್ನಾಟಕ (@kannadamanasuga) April 24, 2025