ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಅವರ ಅಂತ್ಯಕ್ರಿಯೆ ಪೀಣ್ಯಾದ ಚಿತಾಗಾರದಲ್ಲಿ ಮರಾಠಾ ಕ್ಷತ್ರೀಯ ಸಂಪ್ರದಾಯದಂತೆ ನೆರವೇರಿದೆ. ಪುತ್ರ ಗುರುಪ್ರಸಾದ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.
ಈ ವೇಳೆ, ನಟನ ಅಂತ್ಯಕ್ರಿಯೆಯಲ್ಲಿ ಚಿತ್ರರಂಗದ ಹಲವು ಕಲಾವಿದರು ಭಾಗಿಯಾಗಿದ್ದಾರೆ. ಅಂತ್ಯಕ್ರಿಯೆಯ ಬಳಿಕ ಬ್ಯಾಂಕ್ ಜನಾರ್ದನ ಪುತ್ರ ಮಾತನಾಡಿ, ತಂದೆ ಅಂತ್ಯಕ್ರಿಯೆ ಮುಗಿದಿದೆ. ಬೆಳಗ್ಗೆಯಿಂದ ಎಲ್ಲರೂ ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಇಷ್ಟು ವರ್ಷಗಳ ಕಾಲ ನಮ್ಮ ತಂದೆಯನ್ನು ಹಾರೈಸಿದ್ದೀರಾ ಕರ್ನಾಟಕ ಜನತೆಗೆ ಧನ್ಯವಾದ ಎಂದು ಭಾವುಕ ಮಾತುಗಳನ್ನಾಡಿದ್ದಾರೆ.