ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನ ಹಿನ್ನೆಲೆಯಲ್ಲಿ ಕೊನೆಗೂ ನಮ್ಮನ್ನು ಭಾರತೀಯ ಪ್ರಜೆಗಳು ಎಂದು ಕರೆಸಿಕೊಳ್ಳುವಂತಾಗಿದೆ ಎಂದು ದಿಲ್ಲಿಯಲ್ಲಿ ನೆಲೆಸಿರುವ ಪಾಕಿಸ್ತಾನದ ಹಿಂದು ನಿರಾಶ್ರಿತರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಹಿಂದು ನಿರಾಶ್ರಿತ ಸಮುದಾಯದ ಮುಖ್ಯಸ್ಥ ಧರ್ಮವೀರ್ ಸೋಲಂಕಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಈ ನಡೆಯಿಂದಾಗಿ ನಮ್ಮ ಸಮುದಾಯದ ಸುಮಾರು 500 ಮಂದಿ ಪೌರತ್ವ ಪಡೆಯಲಿದ್ದೇವೆ ಎಂದಿದ್ದಾರೆ.
ಭಾರತದ ಪೌರತ್ವ ಪಡೆಯುವುದು ನಮ್ಮ ಬಹುಕಾಲದ ಕನಸಾಗಿತ್ತು. 2013ರಲ್ಲಿ ತವರಿಗೆ ವಾಪಸ್ ಬಂದು ನೆಲೆಸಿದ್ದಕ್ಕೂ ಈಗ ಸಾರ್ಥಕವಾಗಿದೆ. ಕೊನೆಗೂ ನಮ್ಮನ್ನು ಭಾರತೀಯ ಪ್ರಜೆಗಳು ಎಂದು ಕರೆಯುವಂತಾಗಿರುವುದು ಅತೀವ ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ.