ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡದ ರೀತಿ ತಿಳಿಸಲು ನಟ ದರ್ಶನ್ ಜೊತೆ ಮಾತಾಡುತ್ತೇನೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅನಾವಶ್ಯಕವಾಗಿ ಕಾಮೆಂಟ್ ಹಾಕುವುದು ವೇಸ್ಟ್. ಕಾಮೆಂಟ್ ಮಾಡಿ ಅವರನ್ನು ಇವರನ್ನು ಬೈಯ್ಯುವುದರಿಂದ ಏನು ಆಗಲ್ಲ. ಅಭಿಮಾನಿಗಳು ಕೆಟ್ಟ ಕಾಮೆಂಟ್ ಮಾಡದಂತೆ ನಟ ದರ್ಶನ್ ಸಲಹೆ ಕೊಡಬೇಕು. ಈ ಬಗ್ಗೆ ನಾನು ದರ್ಶನ್ ಅವರ ಜೊತೆ ಮಾತಾಡುತ್ತೇನೆ ಎಂದು ತಿಳಿಸಿದ್ದಾರೆ.