January17, 2026
Saturday, January 17, 2026
spot_img

ಪೋಲಿಯೋ ಮುಕ್ತ ಕರ್ನಾಟಕಕ್ಕೆ ಪಣ: 5 ವರ್ಷದೊಳಗಿನ ಕಂದಮ್ಮಗಳಿಗೆ ಇಂದು ತಪ್ಪದೇ ಲಸಿಕೆ ಹಾಕಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನು ಪೋಲಿಯೋ ಮಹಾಮಾರಿಯಿಂದ ಸಂಪೂರ್ಣವಾಗಿ ಮುಕ್ತಗೊಳಿಸುವ ಗುರಿಯೊಂದಿಗೆ ಕರ್ನಾಟಕದಾದ್ಯಂತ ಇಂದಿನಿಂದ ‘ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ–2025’ ಚಾಲನೆ ಪಡೆಯಲಿದೆ. ಡಿಸೆಂಬರ್ 24ರ ವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ಹಾಕಿಸುವಂತೆ ಆರೋಗ್ಯ ಇಲಾಖೆ ಪೋಷಕರಲ್ಲಿ ಮನವಿ ಮಾಡಿದೆ.

ಪೋಲಿಯೋ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಮಾರಕ ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಆದರೆ, ಲಸಿಕೆಯ ಮೂಲಕ ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿದೆ. “ಎರಡು ಹನಿ ಲಸಿಕೆ, ನಿಮ್ಮ ಮಗುವಿನ ಸುಂದರ ಭವಿಷ್ಯಕ್ಕೆ ಮುನ್ನುಡಿ” ಎಂಬ ಘೋಷವಾಕ್ಯದೊಂದಿಗೆ ಸರ್ಕಾರ ಈ ಬೃಹತ್ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಎಲ್ಲೆಲ್ಲಿ ಲಸಿಕೆ ಲಭ್ಯ?

ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು.

ಅಂಗನವಾಡಿ ಕೇಂದ್ರಗಳು ಹಾಗೂ ‘ನಮ್ಮ ಕ್ಲಿನಿಕ್’ಗಳು.

ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಜನನಿಬಿಡ ಪ್ರದೇಶಗಳು.

ಅಭಿಯಾನದ ಮೊದಲ ದಿನ ಲಸಿಕಾ ಕೇಂದ್ರಗಳಲ್ಲಿ ಹನಿ ಹಾಕಲಾಗುತ್ತದೆ. ನಂತರದ ಎರಡು ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ, ಕೇಂದ್ರಗಳಿಗೆ ಬರಲು ಸಾಧ್ಯವಾಗದ ಮಕ್ಕಳಿಗೆ ಲಸಿಕೆ ತಲುಪಿಸಲಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಅಭಿಯಾನವು ಚುರುಕಾಗಿ ಸಾಗಲಿದ್ದು, ಐದು ನಿಗಮಗಳ ಮೂಲಕ ಒಟ್ಟು 11,34,988 ಮಕ್ಕಳಿಗೆ ಲಸಿಕೆ ನೀಡುವ ಬೃಹತ್ ಗುರಿಯನ್ನು ಹೊಂದಲಾಗಿದೆ.

ನಿಮ್ಮ ಸಮೀಪದ ಲಸಿಕಾ ಕೇಂದ್ರ ಅಥವಾ ಯುಪಿಎಚ್‌ಸಿ ಮಾಹಿತಿ ಪಡೆಯಲು ಜಿಬಿಎ ವಿಶೇಷ ಕ್ಯೂಆರ್ ಕೋಡ್ ಬಿಡುಗಡೆ ಮಾಡಿದೆ. ಸಾರ್ವಜನಿಕರು ಅಧಿಕೃತ ವೆಬ್‌ಸೈಟ್ gba.karnataka.gov.in/polio/ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

Must Read

error: Content is protected !!