ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆಯಲ್ಲಿ ವಕ್ಫ್ ಮಸೂದೆ ಮತ್ತು ಮತಾಂತರ ವಿರೋಧಿ ಕಾನೂನುಗಳಿಗೆ ತನ್ನ ವಿರೋಧವನ್ನು ಪುನರುಚ್ಚರಿಸಿದ್ದು, ಕೊನೆಯವರೆಗೂ ಧಾರ್ಮಿಕ, ಭಾಷಾ, ಜಾತಿ ಆಧಾರಿತ ಮತ್ತು ಪ್ರಾದೇಶಿಕ ವಿಭಜನೆಯ ರಾಜಕೀಯದ ವಿರುದ್ಧ ಹೋರಾಡಲು ಬದ್ಧ ಎಂದು ನಿರ್ಣಯ ತೆಗೆದುಕೊಂಡಿದೆ.
ನಾವು ಭಾರತವನ್ನು ವಿಭಜಿಸಲು ಬಿಡುವುದಿಲ್ಲ ಹಾಗು ವಿಭಜಿಸಲು ಪ್ರಯತ್ನಿಸುವವರು ತಮ್ಮ ಪೈಶಾಚಿಕ ಯೋಜನೆಗಳಲ್ಲಿ ಯಶಸ್ವಿಯಾಗಲು ಅವಕಾಶ ನೀಡುವುದಿಲ್ಲ. ನಮ್ಮ ಮಾರ್ಗ ಸ್ಪಷ್ಟವಾಗಿದೆ: ‘ದ್ವೇಷವನ್ನು ಬಿಟ್ಟುಬಿಡಿ, ಭಾರತವನ್ನು ಒಗ್ಗೂಡಿಸಿ’ ಎಂದು ನಿರ್ಣಯ ತೆಗೆದುಕೊಂಡಿದ್ದಾರೆ.
ಇದರ ಜೊತೆಗೆ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ನಿಕಟ ಸಂಬಂಧ ಮುಂದುವರೆಸುವುದನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. ಆದರೆ ಅದು ಎಂದಿಗೂ ಭಾರತದ ರಾಷ್ಟ್ರೀಯ ಹಿತಾಸಕ್ತಿ ಹಾಳುಮಾಡಬಾರದು ಎಂದು ನಿರ್ಣಯ ಹೇಳಿದೆ.