ಹೊಸ ದಿಗಂತ ಡಿಜಿಟಲ್ ಡೆಸ್ಕ್
ಕಳೆದ 75 ವರ್ಷಗಳಿಂದ ಕೇವಲ ರಾಜಕೀಯ ಮಾಡುತ್ತಾ ಮುಖ್ಯವಾಹಿನಿಯ ಪಕ್ಷಗಳು ಅನುಸರಿಸುತ್ತಿರುವ ಹಿಂದು-ಮುಸ್ಲಿಂ ಎಂಬ ಕೋಮು ರಾಜಕೀಯವೇ ದೇಶದ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.
ಪಕ್ಷದ ವಿದ್ಯಾರ್ಥಿ ವಿಭಾಗ – ಪರ್ಯಾಯ ರಾಜಕೀಯಕ್ಕಾಗಿ ವಿದ್ಯಾರ್ಥಿಗಳ ಸಂಘ(ಎಎಸ್ಎಪಿ) ಉದ್ಘಾಟಿಸಿ ಮಾತನಾಡಿದ ಅವರು,ನಮ್ಮ ದೇಶವು ಬಹಳಷ್ಟು ಸಮಸ್ಯೆಗಳ ವಿರುದ್ಧ ಹೋರಾಡುತ್ತಿದೆ. ಜನರಿಗೆ ಸರಿಯಾದ ಆಹಾರ ಅಥವಾ ಶಿಕ್ಷಣ ಇಲ್ಲ. ಇದು ಏಕೆ ನಡೆಯುತ್ತಿದೆ? ಏಕೆಂದರೆ ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಕಳೆದ 75 ವರ್ಷಗಳಿಂದ ಕೇವಲ ರಾಜಕೀಯ ಮಾಡುತ್ತಿವೆಎಂದು ಹೇಳಿದರು.
ಈ ಪಕ್ಷಗಳು ನಮ್ಮ ಶಾಲಾ ಮಕ್ಕಳಿಗೆ ಹಿಂದು-ಮುಸ್ಲಿಂ ಬಗ್ಗೆ ಮಾತ್ರ ಕಲಿಸುತ್ತಿವೆ. ಇದು ನಮ್ಮ ದೇಶದ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಕೇಜ್ರಿವಾಲ್ ತಿಳಿಸಿದರು.
ರಾಷ್ಟ್ರ ರಾಜಧಾನಿಯಲ್ಲಿ ದೀರ್ಘ ವಿದ್ಯುತ್ ಕಡಿತಕ್ಕಾಗಿ ದೆಹಲಿ ಸರ್ಕಾರವನ್ನು ಟೀಕಿಸಿದ ಕೇಜ್ರಿವಾಲ್, ದೆಹಲಿಯಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಹಿಂದೆಂದೂ ಹೀಗೆ ಆಗಿರಲಿಲ್ಲ. ಮೂರು ತಿಂಗಳೊಳಗೆ, ಅವರು(ಬಿಜೆಪಿ) ದೆಹಲಿಯಲ್ಲಿ ಶಿಕ್ಷಣವನ್ನು ಹಾಳುಮಾಡಲು ಪ್ರಾರಂಭಿಸಿದ್ದಾರೆ ಎಂದರು.