Tuesday, January 27, 2026
Tuesday, January 27, 2026
spot_img

VIRAL | ಮದುವೆಯಾಗುವ ಉದ್ಯೋಗಿಗಳಿಗೆ ಲಕ್ಷ ಲಕ್ಷ ರೂ. ಉಡುಗೊರೆ ಘೋಷಿಸಿದ ಕಂಪನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದುಬೈಯ ಕಂಪನಿಯೊಂದು ಉದ್ಯೋಗಿಗಳಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. ಉದ್ಯೋಗಿಗಳ ಕಲ್ಯಾಣಕ್ಕಾಗಿ ಅಲ್ ಹಬ್ತೂರ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಖಲಫ್ ಅಹ್ಮದ್ ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದಾರೆ.

ಕಾರ್ಮಿಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಯುವ ಉದ್ಯೋಗಿಗಳಿಗೆ ಮದುವೆಯಾಗಲು ನೆರವಾಗುವ ಮೂಲಕ ಗಮನ ಸೆಳೆದಿದ್ದಾರೆ. ಯುವ ಉದ್ಯೋಗಿಗಳಿಗೆ ‌12.5 ಲಕ್ಷ ರುಪಾಯಿ (50,000 ದಿರ್ಹಂ) ‘ಮದುವೆ ಅನುದಾನ’ ನೀಡುವುದಾಗಿ ಘೋಷಿಸಿದ್ದಾರೆ.

ದುಬೈ ಬಿಲಿಯನೇರ್ ಖಲಾಫ್ ಅಹ್ಮದ್ ಅಲ್ ಹಬ್ತೂರ್ ಈ ವರ್ಷ ವಿವಾಹವಾಗುವ ತಮ್ಮ ಕಂಪನಿಯ ಉದ್ಯೋಗಿಗಳಿಗೆ ಈ ಪ್ರಯೋಜನ ಸಿಗಲಿದೆ ಎಂದಿದ್ದಾರೆ. ಅವರು ಯುವ ಉದ್ಯೋಗಿಗಳ ಅನುಕೂಲಕ್ಕಾಗಿ ಈ ಯೋಜನೆ ಜಾರಿ ಮಾಡಿದ್ದಾರೆ.‌ ʼʼನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಎಮಿರಾಟಿ ಉದ್ಯೋಗಿಗಳು ಮದುವೆಯಾದರೆ 12.5 ಲಕ್ಷ ರೂಪಾಯಿ (50,000 ದಿರ್ಹಂ) ‘ಮದುವೆ ಅನುದಾನ’ ನೀಡುತ್ತೇವೆʼʼ ಅವರು ಪ್ರಕಟಿಸಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !