ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಬು ತಮಿಳು ಚಿತ್ರರಂಗದ ಜನಪ್ರಿಯ ನಟ ಆದರೆ ಆಗಾಗ್ಗೆ ವಿವಾದಕ್ಕೊಳಗಾಗುತ್ತಾರೆ. ಈಗ ನಿರ್ಮಾಪಕರೊಬ್ಬರು ಸಿಂಬು ವಿರುದ್ಧ ದೂರು ದಾಖಲಿಸಿದ್ದಾರೆ ಮತ್ತು ನಟ ಸಿಂಬು ಅವರನ್ನು ತಮಿಳು ಚಿತ್ರರಂಗದಿಂದ ತಕ್ಷಣವೇ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.
ಸಿಂಬು ಪ್ರಸ್ತುತ ಥಗ್ ಲೈಫ್ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಸಹ-ನಟನಾಗಿ ಕಾಣಿಸಿಕೊಂಡಿದ್ದಾರೆ. ಮಣಿರತ್ನಂ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಕನ್ನಡದ ‘ಮಫ್ತಿ’ ಸಿನಿಮಾದ ರೀಮೇಕ್ ‘ಪತ್ತು ತಲ’ ಸಿನಿಮಾದಲ್ಲಿ ಸಿಂಭು ನಟಿಸಿದ್ದರು. ಈ ಹಿಂದೆ ಅವರು ‘ವೆಂದು ತನಿದಿತ್ತು ಕಾಡು’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾದ ಬಳಿಕ ‘ಕೊರೊನಾ ಕಿಂಗ್’ ಹೆಸರಿನ ಸಿನಿಮಾನಲ್ಲಿ ಸಿಂಬು ನಟಿಸಬೇಕಿತ್ತು. ‘ಕೊರೊನಾ ಕಿಂಗ್’ ಸಿನಿಮಾವನ್ನು ಗೋಕುಲ್ ಎನ್ ಕೃಷ್ಣ ನಿರ್ದೇಶನ ಮಾಡಿ, ಇಶಾರಿ ಕೆ ಗಣೇಶ್ ನಿರ್ಮಾಣ ಮಾಡಬೇಕಿತ್ತು. ಆದರೆ ಆ ಸಿನಿಮಾದಿಂದ ಸಿಂಬು ಹೊರ ಬಂದರು.
ಕೆಲವು ಆಂತರಿಕ ಸಮಸ್ಯೆಗಳಿಂದಾಗಿ ಸಿಂಭು ಕೊರೊನಾ ಕಿಂಗ್ ಚಿತ್ರದಿಂದ ಹೊರಬಂದಿದ್ದಾರೆ. ನಂತರ ಅವರು ಪತ್ತು ತಲ ಚಿತ್ರವನ್ನು ಪ್ರಾರಂಭಿಸಿದರು.
ಆದರೆ ಇದೀಗ ಕೊರೊನಾ ಕಿಂಗ್ ನಿರ್ಮಾಪಕ ಇಶಾರಿ ಕೆ ಗಣೇಶ್ ಸಿಂಭು ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಸಿಂಬು ನಮ್ಮಿಂದ ಮುಂಗಡ ಹಣ ಪಡೆದು ಚಿತ್ರೀಕರಣದಿಂದ ನಿರ್ಗಮಿಸಿದರು. ಕೂಡಲೇ ಅವರನ್ನು ತಮಿಳು ಚಿತ್ರರಂಗದಿಂದ ನಿಷೇಧಿಸಬೇಕು. ಸದ್ಯ ಸಿನಿಮಾ ಮಾಡುತ್ತಿರುವ ಚಿತ್ರ ಸೇರಿದಂತೆ ಬೇರೆ ಯಾವುದೇ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಬಾರದು ಎಂದಿದ್ದಾರೆ.