ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಗಮಿಸಿಲ್ಲ ಎನ್ನುವ ಕಾರಣಕ್ಕೆ ನಟಿ ಬಗ್ಗೆ ಅನಾವಶ್ಯಕ ಕಮೆಂಟ್ಸ್ ಮಾಡಿದ್ದ ಶಾಸಕ ರವಿ ಗಣಿಗಗೆ ಸಂಕಷ್ಟ ಎದುರಾಗಿದೆ.
ರಶ್ಮಿಕಾ ಮಂದಣ್ಣಗೆ ಭಯ ಹುಟ್ಟಿಸಲಾಗಿದೆ ಎಂದು ರವಿ ಗಣಿಗ ವಿರುದ್ಧ ಮಹಿಳಾ ಆಯೋಗಕ್ಕೆ ಕೊಡವ ಸಂಘಟನೆಯಿಂದ ದೂರು ನೀಡಲಾಗಿದೆ.
ಮತ್ತೆ ರಶ್ಮಿಕಾ ವಿರುದ್ಧ ರವಿ ಗಣಿಗ ನಾಲಿಗೆ ಹರಿಬಿಟ್ಟಿದ್ದಕ್ಕೆ ಕೊಡವ ಸಂಘಟನೆ ನಟಿಯ ಬೆನ್ನಿಗೆ ನಿಂತಿದೆ. ರಶ್ಮಿಕಾ ಅವರನ್ನು ಬೆದರಿಸಿ ಭಯ ಹುಟ್ಟಿಸಲಾಗಿದೆ. ಅವರು ಅತಿಸೂಕ್ಷ್ಮ ಬುಡಕಟ್ಟು ಸಮುದಾಯದವರಾಗಿದ್ದಾರೆ. ಅವರನ್ನು ಬೆದರಿಸುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಹಾಗಾಗಿ ಶಾಸಕನ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಾಚಪ್ಪ ಆಗ್ರಹಿಸಿದ್ದಾರೆ.