ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಭವನದಲ್ಲಿ ಇನ್ಮುಂದೆ ಮಟನ್ ಚಿಕನ್ ಮೀಲ್ಸ್ ಸಿಗೋದಿಲ್ಲ. ಹೌದು, ಇನ್ನು ಮುಂದೆ ರಾಜಭವನದಲ್ಲಿ ಸಿಗುವ ಊಟ ಕಂಪ್ಲೀಟ್ ವೆಜ್ ಆಗಿರುತ್ತದೆ.
ಶ್ರವಣಬೆಳಗೊಳದಲ್ಲಿ ಶ್ರೀಜೈನ ಮಠದ ಆಡಳಿತ ಮಂಡಳಿ ಗುರುವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರರ 2624ನೇ ಜನ್ಮ ಕಲ್ಯಾಣೋತ್ಸವ ಉದ್ಘಾಟಿಸಿ ಮಾತನಾಡಿ. ಫಾರೀನರ್ಸ್ ಬಂದರು ಕೂಡ ಇಲ್ಲಿ ವೆಜ್ ಊಟವನ್ನೇ ಬಡಿಸುತ್ತೇವೆ ಎಂದಿದ್ದಾರೆ.
ಜೈನ ಧರ್ಮ ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಹೀಗಿರುವಾಗ ಈ ಕ್ಷೇತ್ರದ ಸುತ್ತಮುತ್ತ ಮಾಂಸ ಹಾಗೂ ಮದ್ಯದ ಮಾರಾಟ ಹೆಚ್ಚಾಗಿರೋದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಬೇಕಿದೆ ಎಂದಿದ್ದಾರೆ.
ರಾಜಭವನದಲ್ಲಿ ಊಟದ ಬದಲಾವಣೆ ಖಚಿತವಾಗಿದ್ದು, ಇನ್ನು ಮುಂದೆ ವೆಜ್ ಊಟ ಮಾತ್ರ ಸಿಗಲಿದೆ ಎಂದಿದ್ದಾರೆ.