ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಟಿಕುಳಂನಲ್ಲಿ ರೈಲ್ವೆ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಪತ್ತೆಯಾಗಿದೆ. ರೈಲ್ವೆ ನಿಲ್ದಾಣದ ದಕ್ಷಿಣ ಭಾಗದಲ್ಲಿ ಪ್ಲಾಟ್‌ಫಾರ್ಮ್ ಸಂಖ್ಯೆ ಒಂದರ ಪಕ್ಕದಲ್ಲಿರುವ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಪತ್ತೆಯಾಗಿದೆ.
ಕಾಂಕ್ರೀಟ್ ಸ್ಲ್ಯಾಬ್ ತುಂಡು ಪತ್ತೆಯಾದ ಬಳಿಕ ಪ್ರಯಾಣಿಕರು ಮತ್ತು ಸ್ಥಳೀಯರು ತಕ್ಷಣ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದರು. ಬಳಿಕ ರೈಲ್ವೆ ನೌಕರರು ಸ್ಥಳಕ್ಕೆ ತಲುಪಿ ಸ್ಲ್ಯಾಬ್‌ನ್ನು ತೆಗೆದುಹಾಕಿದರು. ಇದರಿಂದ ದೊಡ್ಡ ದುರಂತ ತಪ್ಪಿದಂತಾಯಿತು.
ಘಟನೆಯ ಹಿಂದೆ ಯಾರ ಕೈವಾಡವಿದೆ ಎಂಬುದು ಸ್ಪಷ್ಟವಾಗಿಲ್ಲ. ಕೋಟಿಕುಳಂ ರೈಲು ನಿಲ್ದಾಣದ ಸೂಪರಿಂಟೆಂಡೆಂಟ್ ಅವರ ದೂರಿನ ಮೇರೆಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕಳೆದ ವರ್ಷ ಕೋಟುಕುಳಂನ ಹಳಿಯಲ್ಲಿ ಕಬ್ಬಿಣದ ರಾಡ್‌ನ್ನು ಇರಿಸಲಾದ ಘಟನೆ ನಡೆದಿತ್ತು. ಇದರ ಹಿಂದೆ ಸ್ಕ್ರ್ಯಾಪ್ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ಮಹಿಳೆಯೊಬ್ಬರ ಕೈವಾಡವಿರುವುದು ಕಂಡುಬಂದಿದೆ. ಆದರೆ ಅದು ವಿಧ್ವಂಸಕ ಕೃತ್ಯ ಅಲ್ಲವೆಂದು ಪೊಲೀಸರು ಕಂಡುಕೊಂಡರು.

