April 18, 2026
Saturday, April 18, 2026
spot_img

America Trade Deal ಫೈನಲ್: ರಷ್ಯಾದಿಂದ ತೈಲ ಖರೀದಿ ನಿಲ್ಲಿಸುತ್ತಾ ಭಾರತ? ಮುಂದಿನ ನಿರ್ಧಾರ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಕಾಲದಿಂದ ಚರ್ಚೆಯಲ್ಲಿದ್ದ ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿದೆ. ಎರಡೂ ದೇಶಗಳು ಮಧ್ಯಂತರ ವ್ಯಾಪಾರ ಚೌಕಟ್ಟನ್ನು ಘೋಷಿಸಿದ್ದು, ಈ ಒಪ್ಪಂದ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ರಷ್ಯಾದಿಂದ ತೈಲ ಆಮದು ವಿಚಾರದಲ್ಲಿ ಹೊಸ ಪ್ರಶ್ನೆಗಳು ಎದ್ದಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಭಾರತದ ಅಧಿಕೃತ ಹೇಳಿಕೆಯಲ್ಲಿ ಈ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ. ಮೂಲಗಳ ಪ್ರಕಾರ, ಭಾರತವು ಕಡಿಮೆ ಬೆಲೆಯ ಮತ್ತು ವಿಶ್ವಾಸಾರ್ಹ ಪೂರೈಕೆ ಸಿಗುವ ಮಾರುಕಟ್ಟೆಗಳಿಂದಲೇ ತೈಲ ಖರೀದಿಸುವ ನೀತಿಯನ್ನು ಮುಂದುವರಿಸಲಿದೆ.

ಇದನ್ನೂ ಓದಿ:

ತಜ್ಞರ ಅಭಿಪ್ರಾಯದಲ್ಲಿ, ಈಗಾಗಲೇ ಮುಂದಿನ ತಿಂಗಳುಗಳಿಗೂ ರಷ್ಯಾ ತೈಲಕ್ಕೆ ಒಪ್ಪಂದಗಳು ಮಾಡಿಕೊಂಡಿರುವುದರಿಂದ ತಕ್ಷಣವೇ ಸಂಬಂಧ ಕಡಿತಗೊಳಿಸುವುದು ಕಷ್ಟ. ಜೊತೆಗೆ, ರಷ್ಯಾ ತೈಲವು ಭಾರತೀಯ ಸಂಸ್ಕರಣಾಗಾರಗಳಿಗೆ ತಾಂತ್ರಿಕವಾಗಿ ಅನುಕೂಲಕರವೂ ಆಗಿದೆ.

ಈ ನಡುವೆ, ಅಮೆರಿಕವು ಐದು ವರ್ಷಗಳಲ್ಲಿ ಸುಮಾರು $500 ಬಿಲಿಯನ್ ಮೌಲ್ಯದ ಸರಕು ಖರೀದಿ ಒಪ್ಪಂದವನ್ನೂ ನೀಡಿದೆ. ಹೊಸ ಒಪ್ಪಂದದ ಭಾಗವಾಗಿ, ಅಮೆರಿಕ ಭಾರತ ಮೇಲಿನ 25% ಸುಂಕವನ್ನು ತೆಗೆದುಹಾಕಿದ್ದು, ಭಾರತವೂ ಕೆಲವು ಅಮೆರಿಕನ್ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !