ಹೊಸದಿಗಂತ ವರದಿ ಹಾವೇರಿ:
ಮೈಸೂರಿನಲ್ಲಿ ಸಾಧನಾ ಸಮಾವೇಶ ನಡೆಸುವ ಮೂಲಕ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಅದೇ ಮಾದರಿಯಲ್ಲಿ ಮುಂದೆ ಉತ್ತರ ಕರ್ನಾಟಕದಲ್ಲಿಯೂ ಸಮಾವೇಶ ಮಾಡುತ್ತೇವೆ ಎಂದು ಶಿವಾನಂದ ಪಾಟೀಲ್ ಹೇಳಿದರು.
ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿ, ಐದು ವರ್ಷ ಇರುತ್ತೇನೆಂದು ಸಿಎಂ ಅವರೇ ಹೇಳಿದ್ದಾರೆ, ನಾವೇಕೆ ಅದನ್ನು ಹೇಳಬೇಕು ಎಂದ ಅವರು, ಅಂಗನವಾಡಿ ಹಾಲಿನ ಪುಡಿ ಗೋಲ್ ಮಾಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿಗ್ಗಾವಿಯಲ್ಲಿ ಅಂಗನವಾಡಿ ಭೇಟಿ ಮಾಡಿ 25 ಕೆ.ಜಿ ಪ್ಯಾಕೇಟ್ ಓಪನ್ ಮಾಡಿ ನೋಡಿದ್ದೇನೆ, ತೂಕ ಸರಿಯಾಗಿದೆ. ತಡಸದಲ್ಲಿ ಎರಡು ಅಂಗನವಾಡಿ ಭೇಟಿ ಮಾಡಿದ್ದೇನೆ, ಸರಿಯಾಗಿದೆ. ಆದಾಗ್ಯೂ ತನಿಖೆ ಮಾಡಿಸುತ್ತೇನೆ, ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹಾವೇರಿ ಮೆಡಿಕಲ್ ಕಾಲೇಜು ಸಿಬ್ಬಂದಿ ನೇಮಕದಲ್ಲಿ ಅಕ್ರಮ ವಿಚಾರ ಕುರಿತು ಡೀನ್ ಜೊತೆಗೆ ಮಾತನಾಡಿದ್ದೇವೆ. ತಾಂತ್ರಿಕ ಸಮಸ್ಯೆಗಳಿಂದ ಆಗಿದೆ, ಅಕ್ರಮ ಆಗಿದ್ದರೆ, ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಯೂರಿಯಾ ಗೊಬ್ಬರದ ಜೊತೆ ಲಿಂಕ್ ಗೊಬ್ಬರ ವಿತರಣೆ ವಿಚಾರಕ್ಕೆ ಮಾತನಾಡಿ, ರಾಜ್ಯಕ್ಕೆ ಬೇಕಾದಷ್ಟು ಯೂರಿಯಾ ಗೊಬ್ಬರ ಕೂಡಲು ಕೇಂದ್ರದಿಂದ ಆಗುತ್ತಿಲ್ಲ. ಮಳೆ ಈ ವರ್ಷ ಚೆನ್ನಾಗಿದೆ. ಕಳಪೆ ಗೊಬ್ಬರದ ಬಗ್ಗೆ ನಾಲ್ಕು ಕೇಸ್ ಆಗಿವೆ. ನಕಲಿ ಗೊಬ್ಬರ ಮಾರಾಟಗಾರರ ಬಂಧನಕ್ಕೂ ಕ್ರಮ ಕೈಗೊಳ್ಳುತ್ತೇವೆ, ಅವರ ಲೈಸನ್ಸ್ ರದ್ದು ಮಾಡಿದ್ದೇವೆ. ಉತ್ತಮ ಗೊಬ್ಬರ ಕೊಡಬೇಕೆಂದು ಲೈಸನ್ಸ್ ಕೊಟ್ಟಿರುತ್ತಾರೆ ಕಳಪೆ ವಿತರಿಸಿದರೆ ಕ್ರಮ ತಗೊಳ್ತೀವಿ ಎಂದು ಎಚ್ಚರಿಸಿ ದರು.