ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರು ಮೈಸೂರು ಘಟನೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದ ಪೊಲೀಸ್ ವ್ಯವಸ್ಥೆಗೆ ಸಿದ್ದರಾಮಯ್ಯ ಸರ್ಕಾರದ ಮೇಲೆ ವಿಶ್ವಾಸ ಹೊರಟುಹೋಗಿದೆ, ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣವನ್ನು ಸರ್ಕಾರ ಮುಚ್ಚಿಹಾಕಿದ್ದು ಅವರಿಗೆ ಚೆನ್ನಾಗಿ ಗೊತ್ತಿದೆ, ಕರ್ತವ್ಯ ನಿರ್ವಹಿಸಿದ ಪೊಲೀಸರೇ ಅಪರಾಧಿಗಳಾಗಿ ಬಿಡುತ್ತಾರೆ, ಕೆಲವರನ್ನು ಸಸ್ಪೆಂಡ್ ಇಲ್ಲವೇ ಟ್ರಾನ್ಸ್ಫರ್ ಕೂಡ ಆಗ್ತಾರೆ ಎಂದು ಕಿಡಿಕಾರಿದ್ದಾರೆ.