ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದ ವಿರುದ್ಧ ಮತ್ತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗುಡುಗಲಾರಂಭಿಸಿದ್ದು, ಗೃಹ ಇಲಾಖೆ (Home Department) ವರ್ಗಾವಣೆ ರಹಸ್ಯ ಸಭೆಯಲ್ಲಿ ವೈಎಸ್‌ಟಿ ಭಾಗಿ ಮಾಹಿತಿ ಸ್ಫೋಟಿಸಿದ್ದ ಹೆಚ್‌ಡಿಕೆ ಈಗ ಆ ಸಭೆ ಬಗ್ಗೆ ಮತ್ತಷ್ಟು ರಹಸ್ಯಗಳನ್ನ ಬಿಚ್ಚಿಟ್ಟಿದ್ದಾರೆ.
ಕಳೆದ ಜುಲೈ 30ರ ಸೀಕ್ರೆಟ್ ಸಭೆಯಲ್ಲಿ ಗೃಹ ಇಲಾಖೆ ವರ್ಗಾವಣೆ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwara) ನಡುವೆ ಜಟಾಪಟಿ ನಡೆದಿತ್ತು ಅಂತ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಜೆ.ಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕುಮಾರಸ್ವಾಮಿ, ಆವತ್ತು ಸಭೆ ನಡೆದ ಪೊಲೀಸ್ ಮೆಸ್‌ನಲ್ಲಿ ಸಿಎಂಗೂ-ಗೃಹ ಸಚಿವರಿಗೂ ಘರ್ಷಣೆ ಆಯ್ತು. ಸರ್ಕಾರದ ಶಾಸಕರಿಗೂ ಏನಾಯ್ತು ಅಂತ ಎಲ್ಲಾ ಗೊತ್ತಿದೆ. ವರ್ಗಾವಣೆ ಪ್ರಕ್ರಿಯೆ ಆಗುವಾಗ ಜೊತೆಗೆ ಯಾರು ಕೂತಿದ್ರು? ಅದೆಲ್ಲ ಗೊತ್ತಿಲ್ವಾ? ಸಾಕ್ಷಿಗೆ ಬೇಕಾದ್ರೆ ಮೆಸ್‌ನಲ್ಲಿ ಸಿಸಿ ಕ್ಯಾಮೆರಾಗಳಿವೆ, ಪರಿಶೀಲಿಸಬಹುದು ಎಂದಿದ್ದಾರೆ.