ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಗೈರು: ಬಿಜೆಪಿ ಶಾಸಕ ಯತ್ನಾಳ್ ಟೀಕೆ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು ಆಗಲು ನಿರ್ಧರಿಸಿರುವ ವಿಚಾರವಾಗಿ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ.

ಹಿಂದೂ ವಿರೋಧಿ ನಿಲುವು ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು, ಇವರ ಡೋಂಗಿ ಜಾತ್ಯತೀತವಾದಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಯತ್ನಾಳ್, ಕಾಂಗ್ರೆಸ್ ಪಕ್ಷದ ನೈಜ ಮನಸ್ಥಿತಿ, ಹಿಂದೂ ವಿರೋಧಿ ನಿಲುವು ಏನೆಂದು ತಿಳಿಯುವುದಕ್ಕೆ ಇದಕ್ಕಿಂತ ಉತ್ತಮವಾದ ಉದಾಹರಣೆ ಬೇಕಿಲ್ಲ. ಇಡೀ ದೇಶದಲ್ಲೇ ಹಬ್ಬದ ವಾತಾವರಣವಿರಬೇಕಾದರೆ, ಕ್ಷುಲ್ಲಕ ರಾಜಕಾರಣಕ್ಕೆ ಇವರು ಶ್ರೀ ರಾಮ ದೇವರ ಪ್ರಾಣಪ್ರತಿಷ್ಠಾಪನೆಯ ಆಮಂತ್ರಣವನ್ನು ತಿರಸ್ಕರಿಸುವುದು ಇವರ ಡೋಂಗಿ ಜಾತ್ಯತೀತವಾದಕ್ಕೆ ಹಿಡಿದ ಕೈಗನ್ನಡಿ. ಶ್ರೀ ರಾಮನು ಇವರಿಗೆ ಒಳ್ಳೆಯ ಬುದ್ದಿಯನ್ನು ನೀಡಲಿ ಎಂದರು.

ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠಾಪನಾ ಸಮಾರಂಭವನ್ನು ಬಹಿಷ್ಕರಿಸುವ ಉದ್ದೇಶಪೂರ್ವಕ ನಿರ್ಧಾರದ ಮೂಲಕ ಕಾಂಗ್ರೆಸ್ ಪಕ್ಷದ ಹುಸಿ ಜಾತ್ಯತೀತತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಲಾಗಿದೆ ಎಂದು ಯತ್ನಾಳ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!